ಆಗುಂಬೆ ಘಾಟ್: 4 ತಿಂಗಳು ಘನವಾಹನ ಸಂಚಾರ ನಿಷೇಧ!

ಉಡುಪಿ: ಆಗುಂಬೆ ಘಾಟ್ ನಲ್ಲಿ ರಸ್ತೆಪಕ್ಕದ ಗುಡ್ಡದಿಂದ ಮಳೆಯ ಹಿನ್ನೆಲೆಯಲ್ಲಿ ತೇವಾಂಶದಿಂದ ಮಣ್ಣು ಕುಸಿಯುವ ಭೀತಿ ಎದುರಾಗಿದ್ದು ಮುಂದಿನ 4 ತಿಂಗಳ ಕಾಲ ಘನವಾಹನ ಸಂಚಾರವನ್ನು ನಿಷೇಧಿಸಿ ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ಆದೇಶ ಹೊರಡಿಸಿದ್ದಾರೆ.
ಮಲೆನಾಡಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ಘಾಟ್ ರಸ್ತೆ ಇದಾಗಿರುವ ಕಾರಣ ಘನವಾಹನಗಳು ಹೆಚ್ಚಾಗಿ ಈ ರಸ್ತೆಯಲ್ಲಿ ಸಂಚಾರ ನಡೆಸುತ್ತವೆ. ಪ್ರತೀ ಬಾರಿ ಮಳೆಗಾಲದಲ್ಲೂ ಇಲ್ಲಿ ಗುಡ್ಡ ಕುಸಿಯುತ್ತಿದ್ದು ಘನ ವಾಹನಗಳ ಸಂಚಾರವನ್ನು ನಿಷೇಧಿಸಲಾಗುತ್ತಿತ್ತು. ಕಳೆದ ಕೆಲದಿನಗಳಿಂದ ಆಗುಂಬೆ ಘಾಟ್ ನಲ್ಲಿ ಭಾರೀ ಮಳೆಯಾಗುತ್ತಿದೆ. ಇದರಿಂದ ಗುಡ್ಡ ಕುಸಿತದ ಅಪಾಯ ಎದುರಾಗಿದೆ. 12 ಟನ್ ಗಿಂತ ಅಧಿಕ ಭಾರದ ವಾಹನಗಳನ್ನು ಅಕ್ಟೋಬರ್ 15ರ ವರೆಗೂ ಘನವಾಹನಗಳಿಗೆ ನಿಷೇಧ ಹೇರಲಾಗಿದೆ. ವಾಹನಗಳು ಬ್ರಹ್ಮಾವರ-ಹುಲಿಕಲ್ ಘಾಟ್ ಮಾರ್ಗವಾಗಿ ಶಿವಮೊಗ್ಗ ಜಿಲ್ಲೆ ಹಾಗೂ ಕಾರ್ಕಳ ಎಸ್.ಕೆ.ಬಾರ್ಡರ್ ಮೂಲಕ ಚಿಕ್ಕಮಗಳೂರು ಹಾಗೂ ಶಿವಮೊಗ್ಗ ಜಿಲ್ಲೆಗೆ ವಾಹನಗಳು ಸಂಚಾರ ಮಾಡಬಹುದಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

Leave a Reply

Your email address will not be published. Required fields are marked *