“ಅಣ್ಣಾಮಲೈ ಮೋದಿಯವರಿಂದ ಪ್ರೇರಿತರಾಗಿ ಬಿಜೆಪಿ ಸೇರಿದ್ದಾರೆ” -ನಳಿನ್ ಕುಮಾರ್

ಮಂಗಳೂರು: ಮಾಜಿ ಪೊಲೀಸ್ ಅಧಿಕಾರಿ ಅಣ್ಣಾಮಲೈ ಅವರು ಸೇವಾ ದಕ್ಷತೆಗಾಗಿ ರಾಜ್ಯದಲ್ಲಿ ಮನೆಮಾತಾದವರು. ಇವರು ಬಿಜೆಪಿ ಸೇರಲು ಮುಖ್ಯ ಕಾರಣ ಮಾನ್ಯ ಪ್ರಧಾನಿ ನರೇಂದ್ರ ಮೋದಿಯವರ ಆಡಳಿತ ವೈಖರಿ ಮತ್ತು ನಿಸ್ವಾರ್ಥ ದೇಶಪ್ರೇಮ. ಹೀಗಾಗಿ ಅಣ್ಣಾಮಲೈ ಅವರಂತಹ ಅಧಿಕಾರಿಗಳು ಬಿಜೆಪಿ ಬೆಂಬಲಿಸಿರುವುದು ಸರಿಯಾದ ನಿರ್ಧಾರ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಸಂಸದ ನಳಿನ್ ಕುಮಾರ್ ಕಟೀಲು ಹೇಳಿದ್ದಾರೆ.
ಅಣ್ಣಾಮಲೈ ಅವರಿಗೆ ರಾಜ್ಯ ಮಾತ್ರವಲ್ಲದೆ ದೇಶಾದ್ಯಂತ ಅಸಂಖ್ಯ ಅಭಿಮಾನಿಗಳಿದ್ದಾರೆ. ಅವರು ಅಣ್ಣಾಮಲೈ ಬೆಂಬಲಕ್ಕೆ ಇದ್ದಾರೆ. ದಕ್ಷ ಅಧಿಕಾರಿ ರಾಜಕೀಯದಲ್ಲೂ ದಕ್ಷತೆಯಿಂದ ಕಾರ್ಯ ನಿರ್ವಹಿಸುತ್ತಾರೆ ಎಂಬ ಭರವಸೆ ಜನರಲ್ಲಿದೆ. ಹೀಗಾಗಿ ಸೂಕ್ತ ಪಕ್ಷವನ್ನೇ ಆಯ್ಕೆ ಮಾಡಿದ್ದಾರೆ ಎಂದು ನಳಿನ್ ಕುಮಾರ್ ಪ್ರತಿಕ್ರಿಯಿಸಿದ್ದಾರೆ.

Leave a Reply

Your email address will not be published. Required fields are marked *