ಅಕ್ರಮ ಸಾಗಾಟದ 11 ಜಾನುವಾರುಗಳ ಸಹಿತ ಮೂವರು ಆರೋಪಿಗಳು ವಶಕ್ಕೆ

ಬೆಳ್ತಂಗಡಿ: ಚಿಕ್ಕಮಗಳೂರಿನಿಂದ ಮಂಗಳೂರು ಕಡೆಗೆ ಅಕ್ರಮವಾಗಿ ಗೋಸಾಗಾಟ ನಡೆಸುತ್ತಿದ್ದ ತಂಡ ವೊಂದು ಧರ್ಮಸ್ಥಳ ಠಾಣೆಯ ಉಪ ನಿರೀಕ್ಷಕ ಪವನ್ ಕುಮಾರ್ ಹಾಗೂ ಠಾಣಾ ಸಿಬ್ಬಂದಿಯ ಕಾರ್ಯಾಚರಣೆ ಯಿಂದ ಕಂಬಿ ಎಣಿಸುವಂತಾಗಿದೆ.
ಧರ್ಮಸ್ಥಳ ಠಾಣೆಯ ಪೊಲೀಸ್ ಉಪನಿರೀಕ್ಷಕ ಪವನ್ ಕುಮಾರ್ ಹಾಗೂ ತಂಡವು ಜೂ. 25ರ ಬೆಳಗ್ಗಿನ ವೇಳೆ ಚಾರ್ಮಾಡಿ ಗೇಟ್ ಬಳಿ ವಾಹನ ತಪಾಸಣೆ ಮಾಡುತ್ತಿದ್ದ ಸಂದರ್ಭ ಚಿಕ್ಕಮಗಳೂರಿನಿಂದ ಅನು ಮಾನಾಸ್ಪದವಾಗಿ ಬರುತ್ತಿದ್ದ ಲಾರಿ ಯನ್ನು ತಡೆದು ಪರಿಶೀಲಿಸಿದಾಗ ಅಮಾನುಷವಾಗಿ ಜಾನುವಾರು ಸಾಗಾಟ ಬೆಳಕಿಗೆ ಬಂದಿತ್ತು.
ಕೆಎ16ಸಿ2426 ನಂಬರ್ನ ಲಾರಿ ಯಲ್ಲಿ ದಾಖಲೆಪತ್ರಗಳಿರಲಿಲ್ಲ. ಇದರ ಲ್ಲಿದ್ದ 5 ಎಮ್ಮೆ, 4 ಹಸುಗಳು ಹಾಗೂ 2 ಸಣ್ಣಕರುಗಳು ಸೇರಿದಂತೆ 11 ಗೋವುಗಳನ್ನು ವಶಪಡಿಸಲಾಗಿದೆ.
ಚಾಲಕ ನರೇಶ್ ಸೇರಿದಂತೆ ಮೊಹಮ್ಮದ್ ಅಜರುದ್ದೀನ್ ಬಿನ್ ಅಬ್ದುಲ್ ರಹಿಮಾನ್, ಹಫೀಜ್ ಬಿನ್ ಮಹಮ್ಮದ್ ಇಬ್ರಾಹಿಂ ಎಂಬವರನ್ನು ವಶಕ್ಕೆ ಪಡೆದು ಲಾರಿ ಸಹಿತ ಜಾನುವಾರುಗಳನ್ನು ಸ್ವಾಧೀನ ಪಡಿಸಿಕೊಳ್ಳಲಾಗಿದೆ.
ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಕಲಂ 5, 7, 9, 11, ಕರ್ನಾಟಕ ಗೋಹತ್ಯೆ ನಿಷೇಧ ಕಾಯ್ದೆ ಹಾಗೂ ಜಾನುವಾರು ಸಂರಕ್ಷಣಾ ಕಾಯ್ದೆ -1964 ಜೊತೆಗೆ ಕಲಂ 34 ಐಪಿಸಿಯಂತೆ ಪ್ರಕರಣ ದಾಖಲಿ ಸಲಾಗಿದೆ.