ಅಕ್ರಮ ಜಾನುವಾರು ಸಾಗಾಟ: ಕೊಟ್ಟಾರ ಬಳಿ ಭಜರಂಗದಳ ದಾಳಿ! 4 ಕೋಣಗಳ ರಕ್ಷಣೆ

ಮಂಗಳೂರು: ಇಂದು ನಸುಕಿನ ಜಾವ ನಗರದಲ್ಲಿ ಅಕ್ರಮ ಜಾನುವಾರು ಸಾಗಾಟ ನಡೆಯುತ್ತಿದ್ದುದನ್ನು ಪತ್ತೆಹಚ್ಚಿದ ಭಜರಂಗದಳ ಸಂಘಟನೆ ದಾಳಿ ಕಾರ್ಯಾಚರಣೆ ನಡೆಸಿದೆ. ಕೊಟ್ಟಾರ ಬಳಿ ಮಿನಿ ಟೆಂಪೋ ತಡೆದು 4 ಕೋಣಗಳನ್ನು ರಕ್ಷಣೆ ಮಾಡಿ ಒಬ್ಬ ಆರೋಪಿಯನ್ನು ಹಿಡಿದು ಪೊಲೀಸ್ ವಶಕ್ಕೆ ಒಪ್ಪಿಸಿದ ಘಟನೆ ನಡೆದಿದೆ.
ಉರ್ವ ಪೊಲೀಸ್ ಠಾಣೆಗೆ ಸಮೀಪದಲ್ಲೇ ಘಟನೆ ನಡೆದಿದ್ದು ಉಡುಪಿ ಯಿಂದ ಮಂಗಳೂರು ಕಸಾಯಿಖಾನೆಗೆ ಅಕ್ರಮವಾಗಿ ಸಾಗಿಸುತ್ತಿದ್ದ 4 ಕೋಣಗಳ ರಕ್ಷಣೆ ಮಾಡಲಾಗಿದೆ. ಉರ್ವ ಪೊಲೀಸರು ಸ್ಥಳಕ್ಕೆ ಧಾವಿಸಿ ಕೋಣಗಳು ಹಾಗೂ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.

ಮತ್ತೆ ದಾಳಿ ಕಾರ್ಯಾಚರಣೆ ಸಂಘಟಿಸಿದ ಭಜರಂಗದಳ!
ಕಳೆದ ಕೆಲವು ವರ್ಷಗಳಿಂದ. ದಾಳಿ ನಡೆಸದೆ ಸೈಲೆಂಟ್ ಇದ್ದ ಸಂಘಟನೆ ಇದೀಗ ಮತ್ತೆ ಚುರುಕಾಗಿ ಮತ್ತೆ ಹಿಂದಿನಂತೆ ಫೀಲ್ಡ್ ಗಿಳಿದು ಗೋಸಾಗಾಟ ತಡೆಯಲು ಮುಂದಾಗಿದ್ದು ಸರಕಾರ ಮತ್ತು ಪೋಲೀಸ್ ಇಲಾಖೆಗೆ ಸವಾಲಾಗಿದೆ. ಪೋಲೀಸ್ ಇಲಾಖೆಯೇ ಗಂಬೀರವಾಗಿ ಇಂತಹ ಪ್ರಕರಣ ಗಮನಿಸಿ ಅಮಾನುಷ ವಾಗಿ ಕೊಂಡೊಯ್ಯುವ ದನಗಳನ್ನು ಹಿಡಿಯಬೇಕು ಮತ್ತು ಇಂತಹ ಅಕ್ರಮ ಚಟುವಟಿಕೆಗಳಿಗೆ ಬ್ರೇಕ್ ಹಾಕಬೇಕು ಹಾಗೂ ಸರಕಾರ ಗೋಹತ್ಯಾ ಕಾನೂನು ಜಾರಿಗೆ ತರಬೇಕೆಂಬ ಆಗ್ರಹ ಸಾರ್ವಜನಿಕ ವಲಯದಲ್ಲಿ ಕೇಳಿಬಂದಿದೆ.

Leave a Reply

Your email address will not be published. Required fields are marked *