ಅಂಬರ್ನಾಥ್ ಶ್ರೀ ದುರ್ಗಾ ಕಾಳಿ ದೇವಸ್ಥಾನದ ಶ್ರೀ ಬಾಲಗಂಗಾಧರ ಸ್ವಾಮೀಜಿ ನಿಧನ
ಅಂಬರ್ ನಾಥ್: ಚಿಂಚ್ ಪಾಡಾ ಶ್ರೀ ದುರ್ಗಾ ಕಾಳಿ ದೇವಸ್ಥಾನದ ಸಂಸ್ಥಾಪಕರಾದ ಶ್ರೀ ಬಾಲಗಂಗಾಧರ ಸ್ವಾಮೀಜಿ (74 ವರ್ಷ ) ಅವರು ಜೂನ್ 20 ರಂದು ಮಧ್ಯಾಹ್ನ 3.30ಕ್ಕೆ ಗಂಟೆಗೆ ಮುಂಬೈಯ ಅಂಬರನಾಥ ದಲ್ಲಿರುವ ಖಾಸಗಿ ಆಸ್ಪತ್ರೆಯಲ್ಲಿ ದೈವಾಧೀನರಾದರು.
ದೈವ-ದೇವರುಗಳ, ಶ್ರೀ ದುರ್ಗಾಕಾಳಿಯ, ಶ್ರೀ ನಿತ್ಯಾನಂದ ಸ್ವಾಮಿಗಳ ಅಪಾರ ಭಕ್ತರಾಗಿದ್ದ ಶ್ರೀ ಬಾಲಗಂಗಾಧರ ಸ್ವಾಮೀಜಿಯವರು ಕಳೆದ ಐದು ದಶಕಗಳಿಂದ ಅಂಬರ್ ನಾಥ್ ಚಿಂಚ್ ಪಾಡಾದಲ್ಲಿ ಶ್ರೀ ದುರ್ಗಾ ಕಾಳಿ ದೇವಸ್ಥಾನದ ಮುಖೇನ ಧಾರ್ಮಿಕ ಹಾಗೂ ಸಾಮಾಜಿಕ ಸೇವೆಯೊಂದಿಗೆ ಜನಾನುರಾಗಿಯಾಗಿದ್ದರು.
ಬಂಟ್ವಾಳ ತಾಲೂಕಿನ ಕುರ್ನಾಡು ಕಂಬ್ಳ ಪದವು ಇಲ್ಲಿಯೂ ಶ್ರೀ ದುರ್ಗಾ ಕಾಳಿ ದೇವಸ್ಥಾನವನ್ನು ಸ್ಥಾಪಿಸಿ ಧಾರ್ಮಿಕ ಸೇವೆ ಹಾಗೂ ಅಚರಣೆಗಳನ್ನು ನಡೆಸಿಕೊಂಡು ಬರುತ್ತಿದ್ದರು.