ಅಂದು ರೇಸಿಂಗ್ ಚಾಲಕಿ, ಇಂದು ನೀಲಿಚಿತ್ರ ತಾರೆ!

ಕ್ಯಾನ್ಬೆರಾ: ಆರ್ಥಿಕ ಸಮಸ್ಯೆ ಯಾವೆಲ್ಲಾ ಸಂಕಷ್ಟಗಳನ್ನು ತಂದೊಡ್ಡುತ್ತದೆ ಹಾಗೂ ಜೀವನದಲ್ಲಿ ಯಾವ ರೀತಿಯ ತಿರುವುಗಳನ್ನು ನೀಡುತ್ತದೆ ಎಂಬುದಕ್ಕೆ ಒಂದು ಸಮಯದ ಖ್ಯಾತ ಆಸ್ಟ್ರೇಲಿಯನ್ ರೇಸಿಂಗ್ ಡ್ರೈವರ್ ರೆನಿ ಗ್ರೇಸಿ ಪ್ರತ್ಯಕ್ಷ ಸಾಕ್ಷಿ. ಒಂದು ಹಂತದಲ್ಲಿ ಆಸ್ಟ್ರೇಲಿಯಾದ ಪ್ರಸಿದ್ದ ಮಹಿಳಾ ಕಾರ್ ಡ್ರೈವರ್ ಆಗಿ ಮಿಂಚಿದ್ದ ಗ್ರೇಸಿ ಇದೀಗ ನೀಲಿಚಿತ್ರ ತಾರೆಯಾಗಿ ಬದಲಾಗಿದ್ದಾಳೆ.
ಕಳೆದ 14 ವರ್ಷಗಳಲ್ಲಿ ಗ್ರೇಸಿ ಅವರು ಆಸ್ಟ್ರೇಲಿಯಾದ ಮೊದಲ ಪೂರ್ಣ ಸಮಯದ ಮಹಿಳಾ ಸೂಪರ್ ಕಾರ್ ಡ್ರೈವರ್ ಆಗಿ ಗುರುತಿಸಿಕೊಂಡಿದ್ದಳು. ಆದರೆ ಹಣದ ಸಮಸ್ಯೆಯಿಂದಾಗಿ ಆಕೆಗೆ ಮೋಟರ್ ಕ್ರೀಡೆಯಲ್ಲಿ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಗ್ರೇಸಿ ಆಸ್ಟ್ರೇಲಿಯಾದ ಪ್ರಸಿದ್ಧ 1000 ಸೂಪರ್ಕಾರ್ ರೇಸ್‍ನಲ್ಲಿ ಭಾಗವಹಿಸಲು 2015ರಲ್ಲಿ ಸಿಮೋನಾ ಡಿ ಸಿಲ್ವೆಸ್ಟ್ರೊ ಜೊತೆಗೂಡಿದ್ದರು. 1998ರಿಂದ ಬಹುತೇಕ ರೇಸ್‍ಗಳಲ್ಲಿ ಗ್ರೇಸಿ ಹಾಗೂ ಸಿಮೋನಾ ಜೊತೆಯಾಗಿಯೇ ರೇಸ್‍ನಲ್ಲಿ ಭಾಗವಹಿಸಿದ್ದರು. ಈ ಮೂಲಕ ಉತ್ತಮ ಮಹಿಳಾ ಜೋಡಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಗ್ರೇಸಿ ರೇಸಿಂಗ್‍ನಲ್ಲೇ ಭವಿಷ್ಯ ರೂಪಿಸಿಕೊಳ್ಳಲು ಯತ್ನಿಸಿದ್ದಳು. ಆದರೆ ಆಕೆಗೆ ಹೆಚ್ಚು ಅವಕಾಶಗಳು ದೊರೆಯಲಿಲ್ಲ. ಹೀಗಾಗಿ ಅನಿವಾರ್ಯವಾಗಿ ಅಡಲ್ಟ್ ಲೋಕಕ್ಕೆ ಎಂಟ್ರಿ ಕೊಟ್ಟಿದ್ದಾಳೆ. ರೇಸಿಂಗ್ ಬಿಟ್ಟ ನಂತರ ಗ್ರೇಸಿ ಸ್ಥಳೀಯ ಕಾರ್ ಯಾರ್ಡ್‍ನಲ್ಲಿ ಕೆಲಸ ಮಾಡಿದ್ದಾಳೆ. ಆದರೆ ಆಕೆಯ ಹಣಕಾಸಿನ ಸಮಸ್ಯೆ ಈ ಕೆಲಸದಿಂದ ಬಗೆಹರಿಯಲಿಲ್ಲ. ಹೀಗಾಗಿ ಅನಿವಾರ್ಯವಾಗಿ ಅಡಲ್ಟ್ ವೆಬ್‍ಸೈಟ್ ಓಪನ್ ಮಾಡಿ ವಿಡಿಯೋ ಹಾಗೂ ಫೋಟೋಗಳನ್ನು ಹಂಚಿಕೊಳ್ಳಲು ಪ್ರಾರಂಭಿಸಿದ್ದಾಳೆ. ನಂತರ ಗ್ರೇಸಿ ಅಡಲ್ಟ್ ಸ್ಟಾರ್ ಆಗಿ ಪರಿವರ್ತನೆಯಾಗಿ ಮೊದಲ ವಾರದಲ್ಲೇ ಸುಮಾರು 2.26 ಲಕ್ಷ ರೂ.(3,000 ಡಾಲರ್)ಸಂಪಾದಿಸಿದ್ದಾಳೆ. ಪ್ರಸ್ತುತ ಆಕೆಯ ಅಡಲ್ಟ್ ವೆಬ್‍ಸೈಟ್‍ಗೆ ಸುಮಾರು 7 ಸಾವಿರ ಜನ ಚಂದಾದಾರರಿದ್ದಾರೆ. ನನ್ನ ಜೀವನದಲ್ಲಿ ಮಾಡಿದ ಅದ್ಭುತ ಕೆಲಸವಿದು. ಕನಸಿನಲ್ಲಿಯೂ ಕಾಣದಷ್ಟು ಹಣವನ್ನು ಈ ಕೆಲಸದಿಂದ ಸಂಪಾದಿಸುತ್ತಿದ್ದೇನೆ, ನಿಜವಾಗಿಯೂ ಈ ಜೀವನವನ್ನು ಎಂಜಾಯ್ ಮಾಡುತ್ತಿದ್ದೇನೆ. ಯಾರು ಏನೇ ಹೇಳಿದರೂ ನನಗೆ ಅಭ್ಯಂತರವಿಲ್ಲ. ಏಕೆಂದರೆ ನಾನು ಚೆನ್ನಾಗಿದ್ದೇನೆ. ಹೆಚ್ಚು ಹಣ ಸಂಪಾದಿಸುತ್ತಿದ್ದೇನೆ. ಈಗಿರುವ ಸ್ಥಾನದಲ್ಲಿ ನಾನು ಸುಭದ್ರವಾಗಿದ್ದೇನೆ ಎಂದು ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾಳೆ. ಸೂಪರ್ಕಾರ್ ಡ್ರೈವರ್ ಆಗಿದ್ದಾಗ ನಿರೀಕ್ಷಿಸಿದ ಫಲಿತಾಂಶ ಸಿಗಲಿಲ್ಲ. ಸಾಕಷ್ಟು ಹಣ ಗಳಿಸಲು ಸಹ ಸಾಧ್ಯವಾಗಲಿಲ್ಲ. ನನ್ನ ಕೈಲಾದಷ್ಟು ಪ್ರಯತ್ನ ಮಾಡಿದೆ. ಆದರೆ ನನ್ನ ಕನಸುಗಳೇ ಕೊಚ್ಚಿ ಹೋಗುವ ಹಂತ ತಲುಪಿತು. ಹೀಗಾಗಿ ಈ ಉದ್ಯೋಗ ಪ್ರಾರಂಭಿಸಿದೆ ಎಂದು ತಮ್ಮ ಜೀವನದಲ್ಲಿ ಎದುರಿಸಿದ ಕಠಿಣ ಪರಿಸ್ಥಿತಿ ಕುರಿತು ವಿವರಿಸಿದ್ದಾಳೆ.

Leave a Reply

Your email address will not be published. Required fields are marked *