ಲಡಾಖ್ ಗಡಿಯಲ್ಲಿ ಭಾರತೀಯ ಗಸ್ತು ಸೈನಿಕರನ್ನು ವಶಕ್ಕೆ ಪಡೆದಿದ್ದ ಚೀನಾ?

ಕಳೆದ ವಾರ ​​ಲಡಾಖ್‌ ಗಡಿಯಲ್ಲಿ ತಮ್ಮ ಸಾಮಾನ್ಯ ಗಸ್ತು ಕಾರ್ಯದಲ್ಲಿ ನಿರತರಾಗಿದ್ದ ಸೈನಿಕರನ್ನು ವಶಕ್ಕೆ ಪಡೆದಿದ್ದ ಚೀನಿ ಸೈನಿಕರು, ಕೆಲವು ಗಂಟೆಗಳ ಬಳಿಕ ಬಿಡುಗಡೆ ಮಾಡಿದ್ದರು ಎನ್ನಲಾಗಿದೆ.
ಲಡಾಖ್: ಗಡಿಯಲ್ಲಿ ವಿನಾಕಾರಣ ಸಮಸ್ಯೆ ಸೃಷ್ಟಿಸುತ್ತಿರುವ ಚೀನಾ, ಭಾರತವನ್ನು ಉದ್ರೇಕಗೊಳಿಸುವ ತನ್ನ ಸಂಚನ್ನು ಮುಂದುವರೆಸಿದೆ. ಸಿಕ್ಕಿಂ ಗಡಿಯಲ್ಲಿ ಭಾರತೀಯ ಸೈನಿಕರೊಂದಿಗೆ ಸಂಘರ್ಷಕ್ಕಿಳಿದಿದ್ದ ಚೀನಾ, ಇದೀಗ ಲಡಾಖ್ ಗಡಿಯಲ್ಲೂ ಹುಂಬತನ ಮೆರೆಯುತ್ತಿದೆ.
ಅದರಂತೆ ಲಡಾಖ್ ಗಡಿಯಲ್ಲಿ ಗಸ್ತು ತಿರುಗುತ್ತಿದ್ದ ಭಾರತೀಯ ಸೇನೆ ಹಾಗೂ ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್(ಐಟಿಬಿಪಿ) ಯೋಧರನ್ನು ಚೀನಾ ವಶಕ್ಕೆ ಪಡೆದಿತ್ತು ಎನ್ನಲಾಗಿದೆ.

ಕಳೆದ ವಾರ ಲಡಾಖ್‌ ಗಡಿಯಲ್ಲಿ ತಮ್ಮ ಸಾಮಾನ್ಯ ಗಸ್ತು ಕಾರ್ಯದಲ್ಲಿ ನಿರತರಾಗಿದ್ದ ಸೈನಿಕರನ್ನು ವಶಕ್ಕೆ ಪಡೆದಿದ್ದ ಚೀನಿ ಸೈನಿಕರು, ಕೆಲವು ಗಂಟೆಗಳ ಬಳಿಕ ಬಿಡುಗಡೆ ಮಾಡಿದ್ದರು ಎನ್ನಲಾಗಿದೆ.

ಇದೆಂತಾ ಕರ್ಮ?: ಭಾರತದ ಮೇಲೆ ಗಡಿ ಅತಿಕ್ರಮಣದ ಆರೋಪ ಹೊರಿಸಿದ ಚೀನಾ!

ಪ್ಯಾಂಗಾಂಗ್ ಲೇಕ್ ಬಳಿಯ ಗಡಿಯಲ್ಲಿ ಭಾರತೀಯ ಸೈನಿಕರನ್ನು ವಶಕ್ಕೆ ಪಡೆದಿದ್ದ ಚೀನಿ ಸೈನಿಕರು, ಐಟಿಬಿಪಿ ಸೈನಿಕರ ಬಂದೂಕುಗಗಳನ್ನೂ ಕಸಿದುಕೊಂಡಿದ್ದರು ಎಂದು ಹೇಳಲಾಗಿದೆ.

ಆದರೆ ಕೆಲವು ಗಂಟೆಗಳ ಬಳಿಕ ಭಾತೀಯ ಸೈನಿಕರನ್ನು ಅವರ ಶಸ್ತ್ರಗಳ ಸಮೇತ ಬಿಡುಗಡೆ ಮಾಡಲಾಗಿದ್ದು, ಎಲ್ಲ ಸೈನಿಕರೂ ಸುರಕ್ಷಿತವಾಗಿ ತಮ್ಮ ಬ್ಯಾರೆಕ್‌ಗಳಿಗೆ ಹಿಂದಿರುಗಿದ್ದಾರೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಅಲ್ಲದೇ ಇಡೀ ಘಟನೆಯ ಸಂಪೂರ್ಣ ವಿವರವನ್ನು ಪ್ರಧಾನಿ ಕಾರ್ಯಾಲಯಕ್ಕೆ ತಲುಪಿಸಲಾಗಿದ್ದು, ಭಾರತೀಯ ಸೈನಿಕರು ಸುರಕ್ಷಿತವಾಗಿ ಮರಳಿದ್ದಾರೆ ಎಂದು ಖಚಿತಪಡಿಸಲಾಗಿದೆ.

ಲಡಾಖ್‌ ಗಡಿಯಲ್ಲಿ ಸೈನ್ಯ ಬಲವರ್ಧನೆ: ಏನಿದು ಸೇನೆಯ ಹೊಸ ಯೋಜನೆ?

ಇದೇ ವೇಳೆ ಪ್ಯಾಂಗಾಂಗ್ ಗಡಿಯಲ್ಲಿ ಮೋಟಾರ್ ಬೋಟ್ ಮೂಲಕ ಗಸ್ತು ತಿರುಗುತ್ತಿರುವ ಚೀನಿ ಸೈನಿಕರು, ಕೆಲವೊಮ್ಮೆ ಉದ್ದೇಶಪೂರ್ವಕವಾಗಿ ಭಾರತದ ಗಡಿ ದಾಟಿ ಬರುತ್ತಿದ್ದಾರೆ ಎಂದೂ ಅಧಿಕಾರಿ ಮಾಹಿತಿ ನೀಡಿದ್ದಾರೆ.

Leave a Reply

Your email address will not be published. Required fields are marked *