ಕೊರೊನಾ ಎಮರ್ಜೆನ್ಸಿ ಸಮಯದಲ್ಲಿ ಗಾಲ್ಫ್ ಆಡಲು ಹೋದ ಡೊನಾಲ್ಡ್ ಟ್ರಂಪ್!

ಕೊರೊನಾ ವೈರಸ್ ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿ ನಿಂತು ಹೋರಾಡಬೇಕಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾತ್ರ ಗಾಲ್ಫ್ ಆಡುವಲ್ಲಿ ನಿರತಾಗಿದ್ದಾರೆ. ಅಮೆರಿಕದಲ್ಲಿ ಕೊರೊನಾ ವೈರಸ್ ರುದ್ರ ತಾಂಡವವಾಡುತ್ತಿರುವ ಸಮಯದಲ್ಲೇ ಟ್ರಂಪ್ ಗಾಲ್ಫ್ ಆಡುವ ಮೂಲಕ ಟೀಕೆಗೆ ಗುರಿಯಾಗಿದ್ದಾರೆ.

ಸ್ಟೆರ್ಲಿಂಗ್: ಮಾರಕ ಕೊರೊನಾ ವೈರಸ್ ಹಾವಳಿಯ ಕಾರಣದಿಂದಾಗಿ ಅಮೆರಿಕದಲ್ಲಿ ರಾಷ್ಟ್ರೀಯ ತುರ್ತು ಪರಿಸ್ಥಿತಿ ಜಾರಿಯಲ್ಲಿದೆ. ಮಾನವನ ರಕ್ತ ಹೀರುತ್ತಿರುವ ಈ ವೈರಾಣು ಇದುವರೆಗೂ ಸುಮಾರು 97,426 ಅಮೆರಿಕನ್ನರನ್ನು ಬಲಿ ಪಡೆದಿದೆ.

ಆದರೆ ಕೊರೊನಾ ವೈರಸ್ ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿ ನಿಂತು ಹೋರಾಡಬೇಕಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾತ್ರ ಗಾಲ್ಫ್ ಆಡುವಲ್ಲಿ ನಿರತಾಗಿದ್ದಾರೆ.

ಹೌದು, ಅಮೆರಿಕದಲ್ಲಿ ಕೊರೊನಾ ವೈರಸ್ ರುದ್ರ ತಾಂಡವವಾಡುತ್ತಿರುವ ಸಮಯದಲ್ಲೇ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗಾಲ್ಫ್ ಆಡುವ ಮೂಲಕ ಟೀಕೆಗೆ ಗುರಿಯಾಗಿದ್ದಾರೆ.

ಹೈಡ್ರಾಕ್ಸಿಕ್ಲೋರೋಕ್ವಿನ್ ಮಾತ್ರೆ ತೆಗೆದುಕೊಳ್ಳುತ್ತಿರುವುದಾಗಿ ಹೇಳಿದ ಟ್ರಂಪ್!

ತಮ್ಮ ಭದ್ರತಾ ಸಿಬ್ಬಂದಿಯೊಂದಿಗೆ ವರ್ಜಿನಿಯಾದ ಸ್ಟೆರ್ಲಿಂಗ್‌ನಲ್ಲಿರುವ ಟ್ರಂಪ್ ನ್ಯಾಶನಲ್ ಗಾಲ್ಫ್ ಕ್ಲಬ್‌ಗೆ ತೆರಳಿದ ಟ್ರಂಪ್, ಕೆಲಹೊತ್ತು ಗಾಲ್ಫ್ ಆಟದಲ್ಲಿ ಮಗ್ನರಾಗಿದ್ದರು.

ಕಳೆದ ಮಾ. 13ರಂದು ಅಮೆರಿಕದಲ್ಲಿ ರಾಷ್ಟ್ರೀಯ ತುರ್ತುಪರಿಸ್ಥಿತಿ ಘೋಷಿಸಲಾಗಿದ್ದು, ಈ ಘೋಷಣೆ ಇನ್ನೂ ಜಾರಿಯಲ್ಲಿದೆ. ಆದರೆ ಮಾ.13ರ ಬಳಿಕ ಇದೇ ಮೊದಲ ಬಾರಿಗೆ ಟ್ರಂಪ್ ತಮ್ಮ ಗಾಲ್ಫ್ ಕ್ಲಬ್‌ಗೆ ಭೇಟಿ ನೀಡಿದ್ದಾರೆ.

ಇನ್ನು ಡೊನಾಲ್ಡ್ ಟ್ರಂಪ್ ತಮ್ಮ ಗಾಲ್ಫ್ ಕ್ಲಬ್‌ಗೆ ಭೇಟಿ ನೀಡಿದ್ದರ ಹಿಂದೆ ಅಮೆರಿಕದಲ್ಲಿ ಕೊರೊನಾ ವೈರಸ್ ಹಾವಳಿ ತಗ್ಗಿದ್ದು, ದೇಶ ಸಹಜ ಸ್ಥಿತಿಗೆ ಮರಳುತ್ತಿದೆ ಎಂಬ ಸಂದೇಶ ರವಾನಿಸುವ ಉದ್ದೇಶವೂ ಇದೆ ಎನ್ನಲಾಗಿದೆ.

ತಜ್ಞರ ಅಭಿಪ್ರಾಯ ಒಪ್ಪದೆ ಅಮೆರಿಕದ ಲಾಕ್‌ಡೌನ್‌ ತೆರವಿಗೆ ಮುಂದಾದ ಟ್ರಂಪ್‌..!

ಒಟ್ಟಿನಲ್ಲಿ ಕೊರೊನಾ ವೈರಸ್ ಹಾವಳಿಯ ಸಂದಿಗ್ಧ ಸಂದರ್ಭದಲ್ಲಿ ಟ್ರಂಪ್ ಗಾಲ್ಫ್ ಆಡಲು ತೆರಳಿದ್ದು, ತೀವ್ರ ಟೀಕೆಗೂ ಗುರಿಯಾಗಿರುವುದು ಸುಳ್ಳಲ್ಲ.

Leave a Reply

Your email address will not be published. Required fields are marked *