ಮಂಗಳೂರಿನಲ್ಲಿ ಎಸ್ ಬಿ ಐ ಗೃಹ ಸಾಲ ಹಬ್ಬ

ಮಂಗಳೂರು: ದೇಶದ ಅತಿ ದೊಡ್ಡ ಬ್ಯಾಂಕ್ ಆಗಿರುವ ಭಾರತೀಯ ಸ್ಟೇಟ್ ಬ್ಯಾಂಕ್ ಪ್ರತಿ ಹಂತದಲ್ಲೂ ಗ್ರಾಹಕ ಕೇಂದ್ರಿತ ಸೇವೆಗಳ ಮೂಲಕ ಜನರಿಗೆ ಹೆಚ್ಚು ಹತ್ತಿರವಾಗಿದ್ದು ದೇಶದ ಆರ್ಥಿಕ ಅಭಿವೃದ್ಧಿಗೆ ಪ್ರಮುಖ ಕಾರಣವಾಗಿದೆ. ತನ್ನ ವಿಭಿನ್ನ ಗ್ರಾಹಕ ಸ್ನೇಹಿ ಸಾಲ ಸೌಲಭ್ಯಗಳನ್ನು ಜನರಿಗೆ ತಲುಪುವಂತೆ ಮಾಡಲು ಅನೇಕ ವಿನೂತನ ಕಾರ್ಯ ಯೋಜನೆಗಳನ್ನು ಹಮ್ಮಿಕೊಳ್ಳುವಲ್ಲಿಯೂ ಸದಾ ಮುಂದಿದೆ. ಪ್ರಸ್ತುತ ಕೇವಲ 6.70 ಶೇಕಡಾ ಕನಿಷ್ಠ ದರದಲ್ಲಿ ಗೃಹ ಸಾಲವನ್ನು ಒದಗಿಸುತ್ತಿರುವ ಪ್ರಮುಖ ಬ್ಯಾಂಕ್ ಎಂಬ ಹೆಗ್ಗಳಿಕೆ ಹೊಂದಿರುವ ಎಸ್‍ಬಿಐ ಇದೀಗ ಮಂಗಳೂರಿನ ಜನರ ಸ್ವಂತ ಮನೆ ಖರೀದಿಸುವ ಕನಸನ್ನು ನನಸಾಗಿಸಲು ಅತ್ಯುತ್ತಮ ಅವಕಾಶವೊಂದನ್ನು ಕಲ್ಪಿಸಿದೆ.

ಬೃಹತ್ ಗೃಹ ಸಾಲ ಹಬ್ಬ- ಪ್ರವೇಶ ಉಚಿತ

ಇದಕ್ಕಾಗಿ ಅಕ್ಟೋಬರ್ 9 ಶನಿವಾರ ಮತ್ತು 10ರ ರವಿವಾರದಂದು ಮಂಗಳೂರುನಗರದ ಟಿಎಂಎ ಪೈ ಕನ್ವೆನ್ಶನಲ್ ಸೆಂಟರ್‍ನಲ್ಲಿ ಬೃಹತ್ ಗೃಹ ಸಾಲ ಹಬ್ಬವನ್ನು ಆಯೋಜಿಸುತ್ತಿದೆ. ಎರಡು ದಿನಗಳ ಕಾಲ ನಡೆಯುವ ಈ ಹಬ್ಬದಲ್ಲಿ ನಗರದ 25ಕ್ಕೂ ಹೆಚ್ಚಿನ ಪ್ರಮುಖ ನಿರ್ಮಾಣ ಸಂಸ್ಥೆಗಳು, 40ಕ್ಕೂ ಹೆಚ್ಚಿನ ಪ್ರಾಜೆಕ್ಟ್‍ಗಳೊಂದಿಗೆ ಭಾಗವಹಿಸಲಿದ್ದು ಜನರು ಎಲ್ಲಾ ನಿರ್ಮಾಣ ಸಂಸ್ಥೆಗಳು ಒದಗಿಸುವ ಸೌಲಭ್ಯಗಳನ್ನು ಹಾಗೂ ಸೌಲರ್ಯಗಳನ್ನು ಸ್ಥಳದಲ್ಲಿಯೇ ಹೋಲಿಕೆ ಮಾಡಿ ತಮಗೆ ಸೂಕ್ತವಾದ ಕನಸಿನ ಮನೆಯನ್ನು ಆಯ್ಕೆ ಮಾಡಿಕೊಳ್ಳುವ ಜೊತೆಗೆ ಎಸ್‍ಬಿಐನ ಶೇಕಡ 6.70 ಕನಿಷ್ಠ ಬಡ್ಡಿ ದರದ ಸಾಲ ಸೌಲಭ್ಯವನ್ನು ಸಹ ಸ್ಥಳದಲ್ಲಿ ಪಡೆಯುವ ಅವಕಾಶವನ್ನು ಒದಗಿಸಲಾಗಿದೆ.
ಮಕ್ಕಳಿಗೂ ಇದೆ ವಿಶೇಷ ಮನೋರಂಜನೆ
ಬ್ಯಾಂಕ್ ಈ ಗೃಹ ಸಾಲ ಹಬ್ಬದಲ್ಲಿ ವ್ಯಾವಹಾರಿಕ ಚಟುವಟಿಕೆಗಳ ಜೊತೆಗೆ ಆಗಮಿಸುವ ಗ್ರಾಹಕರ ಪುಟ್ಟ ಮಕ್ಕಳ ಮನೋರಂಜನೆಯ ಕಡೆಗೂ ವಿಶೇಷ ಗಮನ ನೀಡುತ್ತಿದ್ದು ಕಂದಮ್ಮಗಳ ಮನ ಸೆಳೆಯುವ ಅನೇಕ ರೀತಿಯ ಕ್ರೀಡಾ ಸಾಮಗ್ರಿ ಹಾಗೂ ಚಾಕಲೇಟ್ ಫೌಂಟೇನ್ ಇತ್ಯಾದಿಗಳನ್ನು ವ್ಯವಸ್ಥೆಗೊಳಿಸುವುದು ಗೃಹ ಸಾಲ ಹಬ್ಬದ ಮೆರುಗನ್ನು ಹೆಚ್ಚಿಸಲಿದೆ.
ಒಂದರ್ಥದಲ್ಲಿ ಈ ಹಬ್ಬವು ಮನೆ ಕೊಳ್ಳುವ ಕನಸಿನೊಂದಿಗೆ ಬಂದಿರುವ ಗ್ರಾಹಕರು ಹಾಗೂ ಅವರ ಜೊತೆಗೆ ಬಂದಿರುವ ಮಕ್ಕಳು ಇಬ್ಬರಿಗೂ ಮೆಚ್ಚುಗೆ ಆಗುವುದಂತೂ ಖಂಡಿತ. ಈ ಹಬ್ಬದಲ್ಲಿ ಗೃಹ ಸಾಲದ ಜೊತೆಗೆ ಕಾರು ಸಾಲ, ಚಿನ್ನದ ಸಾಲ, ಶೈಕ್ಷಣಿಕ ಸಾಲ, ಎಸ್‍ಎಮ್‍ಇ ಸಾಲ, ವೈಯ್ಯಕ್ತಿಕ ಸಾಲ, ಪಿಂಚಣಿ ಸಾಲ ಇತ್ಯಾದಿ ಸಾಲ ಸೌಲಭ್ಯಗಳ ಬಗ್ಗೆಯೂ ಸೂಕ್ತ ರೀತಿಯ ಮಾಹಿತಿ ಹಾಗೂ ಅರ್ಹತಾ ಮಾನದಂಡಗಳ ಬಗ್ಗೆ ಮಾಹಿತಿ ನೀಡಲಾಗುತ್ತದೆ.
ಒಟ್ಟಿನಲ್ಲಿ ನಿಮ್ಮ ಕನಸಿನ ಮನೆಗೆ ಮುನ್ನುಡಿ ಬರೆಯಲು ಇದು ಸಕಾಲ.

Leave a Reply

Your email address will not be published. Required fields are marked *