ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(SBI) ಶಾಖೆಯಲ್ಲಿ ಗ್ರಾಹಕರ ನಿರ್ಲಕ್ಷ್ಯ, ಲೋಪಗಳ ಸರಿಪಡಿಸಲು :ಡಿವೈಎಫ್ಐ ಒತ್ತಾಯ.

ಮಂಗಳೂರು :ನಗರ ಹೊರವಲಯ ಬಜಾಲ್ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ಭಾರತೀಯ ಸ್ಟೇಟ್ ಬ್ಯಾಂಕ್ ತನ್ನ ಗ್ರಾಹಕರಿಗೆ ಅಗತ್ಯ ಸೇವೆ ನೀಡುವಲ್ಲಿ ಸಿಬ್ಬಂದಿಗಳ ನಿರ್ಲಕ್ಷ್ಯತನ ಹಾಗೂ ವಿಳಂಬ ನೀತಿಯಿಂದಾಗಿ ಸ್ಥಳೀಯ ಜನಸಾಮಾನ್ಯರು , ವಿದ್ಯಾರ್ಥಿ, ಯುವಜನರು ಉಳಿತಾಯ ಖಾತೆ ತೆರೆಯುವಲ್ಲಿ ಬಹಳಷ್ಟು ಸಮಸ್ಯೆಗಳನ್ನು ಅನುಭವಿಸುತ್ತಿರುವ ದೂರುಗಳು ಕೇಳಿ ಬರುತ್ತಿದ್ದು ಇಂತಹ ಹಲವು ಸಮಸ್ಯೆಗಳನ್ನು ಸಂಬಂಧಪಟ್ಟ ಬ್ಯಾಂಕ್ ಅಧಿಕಾರಿಗಳು ಕೂಡಲೇ ಸರಿಪಡಿಸಬೇಕೆಂದು ಡಿವೈಎಫ್ಐ ಪಕ್ಕಲಡ್ಕ ಘಟಕ ಒತ್ತಾಯಿಸುತ್ತದೆ.ಯಾವುದೇ ಬ್ಯಾಂಕಾಗಲಿ, ಅದರ ಪ್ರಮುಖ ಗುರಿ ಗ್ರಾಹಕನಿಗೆ ಸೇವೆ ಸಲ್ಲಿಸುವುದೇ ಆಗಿದೆ. ಗ್ರಾಹಕನೇ ಬ್ಯಾಂಕಿನ ಬಂಡವಾಳ ಆದರೆ ಬಜಾಲ್ ಪ್ರದೇಶದ ಭಾರತೀಯ ಸ್ಟೇಟ್ ಬ್ಯಾಂಕ್ ಈ ಭಾಗದ ಸುತ್ತಮುತ್ತಲಿನ ಗ್ರಾಹಕರಿಗೆ ಸರಿಯಾದ ಸೇವೆಯನ್ನು ನೀಡದೆ ವಿನಾ ಕಾರಣ ಸತಾಯಿಸುವಂತಹ ಘಟನೆಗಳು ದಿನ ನಿತ್ಯ ನಡೆಯುತ್ತಿದೆ. ಕನಿಷ್ಟ ಹೊಸ ಖಾತೆ ತೆರೆಯುವ ಕೆಲಸಗಳಿಗೂ ತಿಂಗಳುಗಳ ಕಾಲ ವಿಳಂಬಿಸುವಂತಹ ದೂರುಗಳು ಜನ ಸಾಮಾನ್ಯರಿಂದ ಕೇಳಿಬರುತ್ತಿದೆ. ಇತ್ತೀಚೆಗೆ ಬಹಳಷ್ಟು ವಿದ್ಯಾರ್ಥಿಗಳು ತಮ್ಮ ಶಾಲೆ ವಿಚಾರಗಳಿಗೆ ಸಂಬಂಧಿಸಿ ಹೊಸ ಉಳಿತಾಯ ಖಾತೆ ತೆರೆಯಲು , ಮತ್ತು ಇತರೆ ಸಣ್ಣ ಪುಟ್ಟ ಕೆಲಸಗಳಿಗೆ ಸ್ಥಳೀಯ ಬ್ಯಾಂಕ್ ಮೊರೆ ಹೋದರೆ ಅಂತಹ ವಿದ್ಯಾರ್ಥಿಗಳನ್ನು ಮತ್ತವರ ಪೋಷಕರನ್ನು ವಿನಾಕಾರಣ ಸತಾಯಿಸುವುದು ಮತ್ತವರ ಖಾತೆ ತೆರೆಯುವ ಕೆಲಸದಲ್ಲಿ ಸಿಬ್ಬಂದಿಗಳ ನಿರ್ಲಕ್ಷ್ಯತನ ಹಾಗೂ ವಿಳಂಬ ನೀತಿಯಿಂದಾಗಿ ಜನಸಾಮಾನ್ಯರು, ವಿದ್ಯಾರ್ಥಿಗಳು ಬಹಳಷ್ಟು ಸಮಸ್ಯೆಯನ್ನು ಅನುಭವಿಸುತ್ತಿದ್ದಾರೆ. ಒಂದೇ ಒಂದು ದಿನದಲ್ಲಾಗುವ ಉಳಿತಾಯ ಖಾತೆ ತೆರೆಯುವ ಕ್ರಮಗಳಿಗೂ ಸುಮಾರು ನಾಲಕ್ಕು ತಿಂಗಳುಗಳವರೆಗೂ ನೀಡದೆ ಸತಾಯಿಸುತ್ತಿರುವುದು ಖಂಡನೀಯ. ಈ ಬಗ್ಗೆ ಡಿವೈಎಫ್ಐ ಸಂಘಟನೆ ಈಗಾಗಲೇ ಭಾರತೀಯ ಸ್ಟೇಟ್ ಬ್ಯಾಂಕಿನ ಮೇಲಾಧಿಕಾರಿಯವರ ಗಮನಕ್ಕೆ ತಂದಿದೆ. ಇಂತಹ ಹಲವು ಗಂಭೀರ ಸಮಸ್ಯೆಗಳನ್ನು ಸರಿಪಡಿಸಲು, ಬ್ಯಾಂಕ್ ಸಿಬ್ಬಂದಿಗಳು ಗ್ರಾಹಕರಲ್ಲಿ ಸೇವಾ ಮನೋಭಾವದಿಂದ ವರ್ತಿಸುವಂತೆ ಮತ್ತು ಗ್ರಾಹಕರ ಕೆಲಸಗಳನ್ನು ಶೀಘ್ರಗತಿಯಲ್ಲಿ ಇತ್ಯರ್ಥಗೊಳಿಸುವಂತೆ ಡಿವೈಎಫ್ಐ ಬಜಾಲ್ ಪಕ್ಕಲಡ್ಕ ಘಟಕವು ಸಂಬಂಧಪಟ್ಟ ಅಧಿಕಾರಿಗಳನ್ನು ಒತ್ತಾಯಿಸಿದೆ ಎಂದು ಡಿವೈಎಫ್ಐ ಬಜಾಲ್ ಪಕ್ಕಲಡ್ಕ ಕಾರ್ಯದರ್ಶಿ ಧೀರಾಜ್ ಬಜಾಲ್ ಪತ್ರಿಕಾ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.

Leave a Reply

Your email address will not be published. Required fields are marked *