ವಿಕಾಸ್ ಕುಂದರ್ ಕನಸನ್ನು ನನಸಾಗಿಸಲು ಹೊರಟ ಯುವ ನಿರ್ದೇಶಕ ಯತೀಶ್ ಪೂಜಾರಿ

ಮಂಗಳೂರು: ಯತೀಶ್ ಪೂಜಾರಿ ನಿರ್ದೇಶನದಲ್ಲಿ ತಯಾರಾಗುತ್ತಿರುವ “ಬೆಷ್ಟಿ ಫಾರೇವರ್” ಕನ್ನಡ ಮ್ಯೂಸಿಕ್ ವೀಡಿಯೋ ಗೆಳೆತನದ ಸವಿಯನ್ನು ಸವಿಯಲು ರೆಡಿಯಾಗಿದೆ .ಬೆಷ್ಟಿ ಫಾರೇವರ್ ಇದೊಂದು ಗೆಳೆಯ ಮತ್ತು ಗೆಳತಿಯ ನಡುವಿನ ಬಾಂಧವ್ಯವನ್ನು ಬಿಂಬಿಸುವ ಒಂದು ಸುಂದರ ಮ್ಯೂಸಿಕ್ ವಿಡಿಯೋ.ಅದೆಷ್ಟೋ ಲವ್ ಸ್ಟೋರಿ ಗಳನ್ನು ಹಾಗೆ ಬ್ರೇಕಪ್ ಸ್ಟೋರಿ ಗಳನ್ನೂ ನೋಡಿದ್ದೇವೆ . ಆದರೆ ಇದೊಂದು ಪಕ್ಕಾ ಗೆಳೆತನಕ್ಕಾಗಿ ರೆಡಿ ಮಾಡಿದ ಸುಂದರ ಚಿತ್ರಣ ಇರುವ ವಿಡಿಯೋ.

ಕನ್ನಡ ಕೋಗಿಲೆ ಖ್ಯಾತಿಯ ಅಖಿಲಾ ಪಜಿಮನ್ನು ಇವರ ಕಂಠ ಸಿರಿಯಲ್ಲಿ ಮೂಡಿ ಬಂದರೆ ,ಕಾರ್ತಿಕ್ ಮೂಲ್ಕಿ ಕೂಡ ಹಾಡಿದ್ದಾರೆ. ಮುಖ್ಯ ಪಾತ್ರದಲ್ಲಿ ವಿಕಾಸ್ ಕುಂದರ್ ಹಾಗೂ ಸಮತ ಅಮೀನ್ ಬಣ್ಣ ಹಚ್ಚಿದ್ದಾರೆ. ಹಾಗೇನೇ ನಮಿತಾ ಕಿರಣ್, ರಂಜೀತ್ ಅಮೀನ್, ಚುಕ್ಕಿ ವಿಟ್ಲ, ಚ್ಚಿನ್ಮಯ್, ಇವರು ಕೂಡ ನಟಿಸಿದ್ದಾರೆ.

ಸಂಗೀತ ನಿರ್ದೇಶನವನ್ನು ಚಿದಾನಂದ್ ಕಡಬ ಬಹಳ ಸೊಗಸಾಗಿ ಎನೆದಿದ್ದಾರೆ. ಸಾಹಿತ್ಯದ ರುಚಿಯನ್ನು ಅಕ್ಷರಗಳ ಮೂಲಕ ಬಹಳ ಸುಂದರವಾಗಿ ಬರೆದಿದ್ದಾರೆ ಅರ್ಜುನ್ ಲೂಯಿಸ್ .ಛಾಯಾಗ್ರಹಣ ಹಾಗೂ ಸಂಕಲನದಲ್ಲಿ ಪ್ರಜ್ವಲ್ ಸುವರ್ಣ , ಪೋಸ್ಟರ್ ಡಿಸೈನರ್ ಪ್ರಜ್ವಲ್ ಗೋರೆ, ಮೇಕಪ್ ಸುಚಿತ್ರ ಅಮೀನ್ ಹಾಗೂ ಫೋಟೋಗ್ರಫಿ ಹರಿ ಪ್ರಸಾದ್ ಪರಿಂಜೆ, ಪ್ರೊಡಕ್ಷನ್ ಮ್ಯಾನೇಜರ್ ಆಗಿ ಶಾಶ್ವತ್ ಸುವರ್ಣ ಕೆಮ್ಮಣ್ಣು ಕೆಲಸ ಮಾಡಿದ್ದಾರೆ.ಕಥೆ, ಸಂಭಾಷಣೆ, ಚಿತ್ರಕಥೆ ಹಾಗು ನಿರ್ದೇಶನ ಯತೀಶ್ ಪೂಜಾರಿ ಮಾಡಿದ್ದಾರೆ. ಆದಷ್ಟು ಬೇಗ ನಿಮ್ಮ ಕಣ್ಣುಗಳನ್ನು ಕಣ್ತುಂಬಿಕೊಳ್ಳಲು ಸುಂದರ ಚಿತ್ರಣ ತುಂಬಿದ ಒಂದು ಸುಂದರ ಮ್ಯೂಸಿಕ್ ವೀಡಿಯೋ ನಿಮಗಾಗಿ ತಯಾರಾಗಿದೆ .

Leave a Reply

Your email address will not be published. Required fields are marked *