ಯುವತಿ ಸ್ನಾನದ ವೀಡಿಯೋ ತೆಗೆದು ಯುವಕ ಪರಾರಿ

ಉಳ್ಳಾಲ : ಯುವತಿಯೋರ್ವಳು ಸ್ನಾನ ಮಾಡುವಾಗ ಮೊಬೈಲಿನಲ್ಲಿ ಕದ್ದು ಚಿತ್ರೀಕರಿಸುತ್ತಿದ್ದ ಯುವಕನ ಕೃತ್ಯ ಬೆಳಕಿಗೆ ಬರುತ್ತಿದ್ದಂತೆ, ಯುವಕ ಸ್ಥಳದಿಂದ ಕಾಲ್ಕಿತ್ತಿರುವ ಘಟನೆ ಕೋಟೆಕಾರು ಸಮೀಪದ ಮಾಡೂರು ಎಂಬಲ್ಲಿ ನಿನ್ನೆ ತಡರಾತ್ರಿ ವೇಳೆ ನಡೆದಿದೆ.

ಕೆಲಸ ಮುಗಿಸಿ ಮನೆಗೆ ವಾಪಸ್ಸಾದ ಯುವತಿ ಮನೆ ಅಂಗಳದಲ್ಲಿರುವ ಬಾತ್ ರೂಮಿನಲ್ಲಿ ಸ್ನಾನಕ್ಕೆ ಇಳಿದಿದ್ದರು. ಇದೇ ಸಂದರ್ಭವನ್ನು ಉಪಯೋಗಿಸಿದ ಯುವಕ ಮನೆಯಂಗಳದಲ್ಲಿ ಇರಿಸಲಾಗಿದ್ದ ಮರದ ಸ್ಟೂಲನ್ನು ತೆಗೆದು ಬಾತ್ ರೂಮಿನ ಕಿಟಕಿ ಬಳಿ ಇರಿಸಿ ಮೇಲಕ್ಕೆ ಹತ್ತಿ ಮೊಬೈಲ್ ಮೂಲಕ ವೀಡಿಯೋ ತೆಗೆದಿದ್ದಾನೆ. ಸ್ನಾನದ ಬಳಿಕ ಟವಲನ್ನು ತೆಗೆಯಲು ಯುವತಿ ಮುಂದಾಗುತ್ತಿದ್ದಂತೆ ಮೊಬೈಲಿನ ಬೆಳಕು ಕಾಣಿಸಿಕೊಂಡಿದ್ದು, ಯುವತಿ ಬೊಬ್ಬಿಟ್ಟಿದ್ದಾರೆ. ಆದರೆ ಅಷ್ಟರಲ್ಲಾಗಲೇ ಕಿರಾತಕ ಯುವಕ ಪರಾರಿಯಾಗಿದ್ದಾನೆ. ಈ ಕುರಿತು ಯುವತಿ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ.

1 thought on “ಯುವತಿ ಸ್ನಾನದ ವೀಡಿಯೋ ತೆಗೆದು ಯುವಕ ಪರಾರಿ

Leave a Reply

Your email address will not be published. Required fields are marked *