ಬಜರಂಗದಳಕ್ಕೆ ಸಿಕ್ಕಿ ಬಿದ್ದ ಭಿನ್ನ ಕೋಮಿನ ಜೋಡಿ

ಮೂಡಬಿದಿರೆ:ಮಂಗಳೂರಿನ ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಮುಂಬೈ ಟೂರಿಗೆ ಹೊರಟಿದ್ದ ಭಿನ್ನ ಕೋಮಿನ ಜೋಡಿ ಮೂಡಬಿದಿರೆಯಲ್ಲಿ ಬಜರಂಗದಳ ಕಾರ್ಯಕರ್ತರಿಗೆ ಸಿಕ್ಕಿ ಬಿದ್ದು ಪೊಲೀಸ್ ವಶವಾಗಿದೆ.
ಮಂಗಳೂರಿನ ಪ್ರತಿಷ್ಠಿತ ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ಭಿನ್ನ ಕೋಮಿನ ಜೋಡಿ ಖಾಸಗಿ ಬಸ್ನಲ್ಲಿ
ಗುರುಪುರ ಕೈಕಂಬವಾಗಿ ಮುಂಬೈ ಗೆ ಪ್ರಯಾಣಿಸುತ್ತಿದ್ದರು. ಈ ಬಗ್ಗೆ ಖಚಿತ ಮಾಹಿತಿ ಪಡೆದ ಮಂಗಳೂರು ಬಜರಂಗದಳ ಕಾರ್ಯಕರ್ತರು ಮೂಡುಬಿದಿರೆ ಭಜರಂಗದಳ ಕಾರ್ಯಕರ್ತರಿಗೆ ರವಾನಿಸಿದ್ದು ಈ ಮಾಹಿತಿಯ ಮೇರೆಗೆ ಬಸ್ ತಡೆದು ಜೋಡಿಯನ್ನು ಪೊಲೀಸ್ ವಶಕ್ಕೆ ಒಪ್ಪಿಸಿದ್ದಾರೆ .