ಮೀನುಗಾರಿಕೆಗೆ ತೆರಳಿದ್ದ ವ್ಯಕ್ತಿ ಬಲೆಗೆ ಸಿಲುಕಿ ಸಾವು!

ಕಾಪು: ಸಾಂಪ್ರದಾಯಿಕ ಮೀನುಗಾರಿಕೆಗೆ ತೆರಳಿದ್ದ ಮೀನುಗಾರನೋರ್ವ ಬಲೆಗೆ ಸಿಲುಕಿ ಮೃತಪಟ್ಟ ಘಟನೆ ಸೋಮವಾರ ಬೆಳಗ್ಗೆ ಕಾಪು ಲೈಟ್ ಹೌಸ್ ಬಳಿ ನಡೆದಿದೆ.ಮೃತಪಟ್ಟ ಮೀನುಗಾರನನ್ನು ಕಾಪು ಗರಡಿ ಬಳಿ ನಿವಾಸಿ ಕಾಸ್ಮರ್ (65) ಎಂದು ಗುರುತಿಸಲಾಗಿದೆ.
ಸೋಮವಾರ ಬೆಳಗ್ಗೆ ಸಾಂಪ್ರದಾಯಿಕ ಮೀನುಗಾರಿಕೆಗೆ ಎಂದು ತೆರಳಿದ್ದು ಮೀನುಗಾರಿಕೆಯಲ್ಲಿ ನಿರತರಾಗಿದ್ದ ವೇಳೆಯೇ ಬಲೆಯೊಳಗೆ‌ ಸಿಲುಕಿ, ಸಮುದ್ರಕ್ಕೆ ಬಿದ್ದು ಮೃತಪಟ್ಟಿರಬೇಕೆಂದು ಸಂಶಯಿಸಲಾಗಿದೆ.
ಕಾಸ್ಮಾರ್ ನೀರಿನಲ್ಲಿ‌ ಮುಳುಗುತ್ತಿರುವುದನ್ನು ಸ್ಥಳೀಯ ಮೀನುಗಾರರು ಗಮನಿಸಿದ್ದು, ತಕ್ಷಣ ಅವರ ನೆರವಿಗೆ ಧಾವಿಸಿದ್ದರು.‌ ಆದರೆ ಅಷ್ಟರಲ್ಲೇ ಅವರು ಮೃತಪಟ್ಟಿದ್ದರು.ಮೃತದೇಹವನ್ನು ಮೇಲಕ್ಕೆತ್ತಲಾಗಿದ್ದು, ಕಾಪು‌ ಪೊಲೀಸರು ಸ್ಥಳಕ್ಕೆ ಭೇಟಿ ತನಿಖೆ ನಡೆಸುತ್ತಿದ್ದಾರೆ .

Leave a Reply

Your email address will not be published. Required fields are marked *