ದೇರೆಬೈಲ್ ,ಕೊಂಚಾಡಿ ಮನೆಗೆ ನುಗ್ಗಿದ ಕುಡಿಯುವ ನೀರು !

ಮಂಗಳೂರು :ರಸ್ತೆ ಅಗೆಯುವ ಬರದಲ್ಲಿ ಕುಡಿಯುವ ನೀರಿನ ಮುಖ್ಯ ಪೈಪ್ ಒಡೆದು ಹೋಗಿ ಸುತ್ತ ಮುತ್ತಲಿನ ಅಂಗಡಿ ಹಾಗು ಮನೆಗೆ ನೀರು ನುಗ್ಗಿದ್ದು ಮನೆಮಂದಿಯೆಲ್ಲ ನಿದ್ದೆ ಇಲ್ಲದೆ ಎರಡು ದಿನದಿಂದ ರಸ್ತೆ ಬದಿ ನಿಂತು ನೀರು ಹೊರ ಹಾಕುತ್ತಿರುವ ಘಟನೆ ಮಂಗಳೂರು ನಗರದ ಹೊರವಲಯದ ದೇರೆಬೈಲು ಕೊಂಚಾಡಿ ನಾಗಕನ್ನಿಕಾ ದ್ವಾರದ ಬಳಿ ನಡೆದಿದೆ


ರಸ್ತೆ ಕಾಂಕ್ರಿಟೀಕರಣ ಗುತ್ತಿಗೆ ವಹಿಸಿಕೊಂಡ ಸಂಸ್ಥೆ ರಸ್ತೆ ಅಗೆಯುವ ಬರದಲ್ಲಿ ನೀರಿನ ಪೈಪ್ ಒಡೆದು ಹಾಕಿದ್ದು ದೇರೆಬೈಲು ಕೊಂಚಾಡಿ ಸುತ್ತಮುತ್ತ ನಿವಾಸಿಗಳಿಗೆ ನೀರು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿದೆ ಹಾಗು ಅಂಗಡಿ ,ಮನೆಗೆ ನೀರು ನುಗ್ಗಿದ ಪರಿಣಾಮ ಮನೆಯ ವಸ್ತುಗಳೆಲ್ಲ ಹಾಳಾಗಿದ್ದು ಇಂತಹ ಬೇಜವಾಬ್ದಾರಿ ಸಂಸ್ಥೆಯ ಬಗ್ಗೆ ಮಹಾನಗರ ಪಾಲಿಕೆ ಅಧಿಕಾರಿಗಳಾಗಲಿ ಜನ ಪ್ರತಿನಿಧಿಗಳಾಗಲಿ ಕ್ರಮ ಕೈಗೊಳ್ಳದ ಬಗ್ಗೆ ಸಾರ್ವಜನಿಕರು ತಮ್ಮ ಆಕ್ರೋಶ ಹೊರಹಾಕಿದ್ದು .ಸ್ಥಳೀಯ ಕಾರ್ಪೊರೇಟರ್ ತಕ್ಷಣ ಇದರ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ
