ಮೀನುಗಾರಿಕೆಗೆ ತೆರಳಿದ್ದ ದೋಣಿ ದುರಂತ:ಆರು ಮಂದಿ ನಾಪತ್ತೆ

ಉಳ್ಳಾಲ: ಬೋಳಾರದ ಶ್ರೀ ರಕ್ಷಾ ಹೆಸರಿನ ಮೀನುಗಾರಿಕಾ ಬೋಟ್ ಸೋಮವಾರ ನಸುಕಿನ ಜಾವ ಮೀನುಗಾರಿಕೆಗೆ ತೆರಳಿದ್ದು ,ನಿನ್ನೆ ರಾತ್ರಿ ಬರಬೇಕಿದ್ದ ಬೋಟ್, ಮೀನು ಓವರ್ ಲೋಡ್ ಹಾಗೂ ಭಾರೀ ಗಾಳಿ ಬೀಸಿದ ಪರಿಣಾಮ ಉಳ್ಳಾಲದ ಪಶ್ಚಿಮ ಭಾಗದ ಹಲವು ನಾಟಿಕಲ್ ಮೈಲ್ ದೂರ ಆಳಸಮುದ್ರದಲ್ಲಿ ಮಗುಚಿಬಿದ್ದು 6 ಮಂದಿ ಮೀನುಗಾರರು ನಾಪತ್ತೆಯಾಗಿದ್ದಾರೆ. ಬೋಟ್ ನಲ್ಲಿ ಒಟ್ಟು 20 ಮಂದಿ ಮೀನುಗಾರರಿದ್ದು ಅದರಲ್ಲಿ 14 ಮಂದಿ ಡೆಂಗೀ ಮೂಲಕ ದಡ ಸೇರಿದ್ದಾರೆ .ಮೀನುಗಾರಿಕಾ ಬೋಟ್ ನವರಿಂದ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ.