ಬಿಜೆಪಿ ಬೆಂಬಲಿತ ಅಭ್ಯರ್ಥಿಯ ಸುತ್ತಿಗೆಯಿಂದ ಬಡಿದು ಕೊಲೆಯತ್ನ

ಮಂಗಳೂರು: ರಾಜ್ಯ ಹಜ್ ಕಮಿಟಿ ಸದಸ್ಯ ಹನೀಫ್ ನಿಜಾಮಿ ಎಂಬವರ ತಲೆಗೆ ಸುತ್ತಿಗೆಯಿಂದ ಬಡಿದು ಕೊಲೆಗೆ ಯತ್ನಿಸಿದ ಘಟನೆ ಉಳ್ಳಾಲದ ಮಂಜನಾಡಿ ಸಮೀಪ ನಡೆದಿದೆ.
ಅಸೈಗೋಳಿ ನಿವಾಸಿ ಕಾಂಗ್ರೆಸ್ ಕಾರ್ಯಕರ್ತರೆನ್ನಲಾದ ಕರೀಂ ಎಂಬಾತ ಈ ಕೃತ್ಯ ಎಸಗಿದ್ದಾನೆಂದು ಆರೋಪಿಸಲಾಗಿದೆ.
ರಾಜ್ಯ ಹಜ್ ಕಮಿಟಿ ಸದಸ್ಯ ಹನೀಫ್ ನಿಜಾಮಿ ಅವರು ಮಂಜನಾಡಿ ಅಸೈ ವಾರ್ಡಿನಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದು, ಪಂಚಾಯತ್ ಚುನಾವಣೆಯ ಹಿನ್ನೆಲೆ ಕಾಂಗ್ರೆಸ್ ಕಾರ್ಯಕರ್ತ ಕೊಲೆಗೆ ಯತ್ನಿಸಿದ್ದಾಗಿ ತಿಳಿದುಬಂದಿದೆ.
ಆರೋಪಿ ಕರೀಂ ಸುತ್ತಿಗೆಯಿಂದ ಹನೀಫ್ ಅವರ ತಲೆಗೆ ಬಡಿದಿದ್ದು, ತಲೆಗೆ ಗಂಭೀರ ಗಾಯವಾಗಿದೆ. ಇವರನ್ನು ತಕ್ಷಣ ದೇರಳಕಟ್ಟೆ ಸಮೀಪದ ಕಣಚೂರು ಆಸ್ಪತ್ರೆಗೆ ದಾಖಲಿಸಲಾಗಿದೆ.
ಧಾರ್ಮಿಕ ಗುರುಗಳ ಗಳಾಗಿರುವ ಹನೀಫ್ ನಿಜಾಮಿ ಕರ್ನಾಟಕ ರಾಜ್ಯ ಹಜ್ ಕಮಿಟಿ ಸದಸ್ಯರೂ ಆಗಿದ್ದಾರೆ.
ಕರೀಂ ಕೃತ್ಯ ನಡೆಸಿದ್ದು ಯಾಕೆ?
ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಅವಿರೋಧವಾಗಿ ಆಯ್ಕೆಯಾಗುತ್ತಿದ್ದ ಮಂಜನಾಡಿಯ ಅಸೈ ವಾರ್ಡಿನಲ್ಲಿ ಹನೀಫ್ ನಿಜಾಮಿ ಅವರು ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದರು. ಇದರ ದ್ವೇಷದಿಂದ ಕಾಂಗ್ರೆಸ್ ಕಾರ್ಯಕರ್ತ ಕರೀಂ ಈ ಕೃತ್ಯ ಎಸಗಿದ್ದಾಗಿ ಆರೋಪಿಸಲಾಗಿದೆ.
ರಾಜಕೀಯ ಪ್ರವೇಶ ಅವರ ಇಷ್ಟ.. ಧರ್ಮದ ಅಮಲಿನಲ್ಲಿ ಇಂತಹ ಕೃತ್ಯ ಬರೀ ಹೀನ ದುರ್ಬುದ್ದಿ..