ಕರ್ಫ್ಯೂ ಹಿನ್ನೆಲೆ : ಉರ್ವ ಠಾಣೆಯಲ್ಲಿ ಬಾರ್ ಮಾಲಕರ ಸಭೆ 11ಗಂಟೆಗೆ ಬಾರ್ ಮದ್ಯದಂಗಡಿ ಮುಚ್ಚಲು ಮನವಿ: ನಿಯಮ ಮೀರಿದರೆ ಕಠಿಣ ಕ್ರಮ

ಮಂಗಳೂರು : ರಾತ್ರಿ ಕರ್ಫ್ಯು ಹಿನ್ನೆಲೆಯಲ್ಲಿ ಪೊಲೀಸ್ ಕಮಿಷನರ್ ಅದೇಶದ ಅನ್ವಯ ಉರ್ವ ಠಾಣೆಯ ವ್ಯಾಪ್ತಿಯ ಎಲ್ಲಾ ಬಾರ್ ಮಾಲಕರ ಸಭೆ ಕರೆದ ಠಾಣಾಧಿಕಾರಿಗಳು ರಾತ್ರಿ 11ಗಂಟೆಗೆ ಬಾರ್ ಮತ್ತು ಮದ್ಯದಂಗಡಿಗಳನ್ನು ಮುಚ್ಚಿ ಶಾಂತಿ ಸುವ್ಯವಸ್ಥೆ ಕಾಪಾಡುವಂತೆ ಮನವಿ ಮಾಡಿದ್ದಾರೆ.
ಡಿಸೆಂಬರ್ 24 ರಿಂದ ಜನವರಿ 2ರ ವರೆಗೆ ಹೊಸ ರೂಪದ ಕೋವಿಡ್ ಹರಡುವ ಭೀತಿ ಮತ್ತು ವರ್ಷಾಂತ್ಯ ಮತ್ತು ಹೊಸ ಹೊಸವರ್ಷವನ್ನು ಆಚರಿಸಲು ಜನರು ಗುಂಪುಗೂಡುವ ಸಾಧ್ಯತೆ ಇರುವುದರಿಂದ ರಾಜ್ಯ ಸರಕಾರವು ರಾತ್ರಿ 11 ಗಂಟೆಯಿಂದ ಬೆಳಿಗ್ಗೆ 5 ಗಂಟೆಯವರೆಗೆ ಕರ್ಫ್ಯೂ ವಿಧಿಸಿದೆ.
ಈ ಹಿನ್ನೆಲೆಯಲ್ಲಿ ಬಾರ್ ಮತ್ತು ಮದ್ಯದಂಗಡಿ ಮಾಲಕರ ಸಭೆಯನ್ನು ಕರೆದ ಇನ್ಸ್ಪೆಕ್ಟರ್ ಶರೀಫ್ ಮತ್ತು ಎಸ್ಐ ಶೈಲಜಾ ಉರ್ವ ಠಾಣೆಯ ವ್ಯಾಪ್ತಿಯಲ್ಲಿ ರಾತ್ರಿ ಹತ್ತುವರೆ ಗಂಟೆಯ ನಂತರ ಬಾರ್ ಮತ್ತು ಮದ್ಯದಂಗಡಿಗಳು ತೆರೆದಿರುವುದು ಕಂಡು ಬಂದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆಯನ್ನು ನೀಡಿದ್ದಾರೆ.