ಸರ್ಕ್ಯೂಟ್ ಹೌಸ್ ರಸ್ತೆಯ ಬಳೀ ಮರಣ ಗುಂಡಿ !

ಮಂಗಳೂರು : ಸರ್ಕ್ಯೂಟ್ ಹೌಸ್ ನಿಂದ ಬಿಜೈ ಕಡೆ ಬರುವ ಮುಖ್ಯ ರಸ್ತೆಯ ಬಳಿ ನೀರಿನ ಪೈಪ್ ಲೈನ್ ಅಳವಡಿಸಲು ಪಾರ್ಕ್ ರಸ್ತೆ ಗುತ್ತಿಗೆ ವಹಿಸಿಕೊಂಡ ಸಂಸ್ಥೆ ನಿನ್ನೆ ರಾತ್ರಿ ಗುಂಡಿ ತೆಗೆದು ಅದನ್ನು ಸರಿಯಾಗಿ ಮುಚ್ಚದೆ ಹಾಗು ಸಾರ್ವಜನಿಕರಿಕೆ ಅದರ ಅರಿವನ್ನು ಮೂಡಿಸದೆ ಹಾಗೆ ಬಿಟ್ಟು ತೆರಳಿದ ಪರಿಣಾಮ ಇಂದು ಬೆಳಗ್ಗೆ ಅದೇ ರಸ್ತೆ ಮುಖಾಂತರ ಬಂದ ವಾಹನಗಳೆಲ್ಲ ಗುಂಡಿಗೆ ಬಿದ್ದು ವಾಹನ ಸವಾರರಿಗೆ ತೊಂದರೆ ಉಂಟಾಗಿದ್ದು ರಸ್ತೆ ಗುತ್ತಿಗೆ ವಹಿಸಿಕೊಂಡ ಸಂಸ್ಥೆ ಯಾವುದೇ ರೀತಿಯ ಸೂಚನಾ ಫಲಕ ಅಳವಡಿಸದೇ ಬೇಜವಾಬ್ದಾರಿ ಪ್ರದರ್ಶಿಸಿದೆ ಎಂದು ವಾಹನ ಸವಾರರು ಮಹಾನಗರ ಪಾಲಿಕೆಯಾ ಮೇಲೆ ತಮ್ಮ ಕೋಪ ಹೊರ ಹಾಕಿದ್ದಾರೆ.

