ಮೂರೇ ಗಂಟೆಯಲ್ಲಿ ಸರಗಳ್ಳನ ಬಂಧಿಸಿದ ಉಳ್ಳಾಲ ಪೊಲೀಸರು

ಉಳ್ಳಾಲ: ಬಗಂಬಿಲ ರಸ್ತೆಯಲ್ಲಿ ಯುವತಿಯ ಸರ ಕಳವು ನಡೆಸಿದ ಆರೋಪಿಯನ್ನು ಮೂರೇ ಗಂಟೆಗಳಲ್ಲಿ ಎಸಿಪಿ ನೇತೃತ್ವದ ಉಳ್ಳಾಲ ಹಾಗೂ ಕೊಣಾಜೆ‌ ಪೊಲೀಸರ ತಂಡ ದೇರಳಕಟ್ಟೆ ಯಿಂದ ಬಂಧಿಸಿದ್ದಾರೆ.
ಕೇರಳ ಮೂಲದ ಸುಲ್ತಾನ್ (28) ಬಂಧಿತ. ದೇರಳಕಟ್ಟೆಯಲ್ಲಿರುವ ಹೊಟೇಲೊಂದರಲ್ಲಿ ಕೆಲಸಕ್ಕಿದ್ದ ಈತ ಕಳವು ಕೃತ್ಯದಲ್ಲಿ ಭಾಗಿಯಾಗಿದ್ದಾನೆ. ನಿನ್ನೆ ಸಂಜೆ ಕೆಲಸ ಮುಗಿಸಿ ಮನೆ ಕಡೆಗೆ ತೆರಳುತ್ತಿದ್ದ ನಿಶಾ ಎಂಬವರ ಕುತ್ತಿಗೆಯಿಂದ ಒಂದು ಪವನ್ ಬೆಲೆಬಾಳುವ ಚಿನ್ನದ ಸರವನ್ನು ಬುಲೆಟ್ ಬೈಕಿನಲ್ಲಿ ಬಂದ ಆರೋಪಿ ಸುಲ್ತಾನ್ ಕಳವು ನಡೆಸಿದ್ದ. ಈತನ ಕಳವು ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ತಕ್ಷಣ ಕಾರ್ಯಪ್ರವೃತ್ತರಾದ ಉಳ್ಳಾಲ ಪೊಲೀಸರು ಅಲ್ಲಲ್ಲಿ ಬಂದೋಬಸ್ತ್ ನಡೆಸಿ ತಪಾಸಣೆ ಆರಂಭಿಸಿದ್ದರು. ಕೊಣಾಜೆ ಠಾಣಾ ಕ್ರೈಂ ತಂಡದ ಸಹಕಾರವನ್ನು ಪಡೆದು ತಪಾಸಣೆ ಆರಂಭಿಸಿದಾಗ ಸಿಸಿಟಿವಿಯಲ್ಲಿ ಸೆರೆಸಿಕ್ಕ ಬುಲೆಟ್ ಮತ್ತು ಆರೋಪಿಯ ಟೀಶಟ್೯ ಆಧಾರದಲ್ಲಿ, ಆರೋಪಿ ಬಾರ್ ಒಳಗಡೆ ಪ್ರವೇಶಿಸುತ್ತಿದ್ದಂತೆ ಸೆರೆ ಹಿಡಿದು ಬಂಧಿಸಿದ್ದಾರೆ. ಯುವತಿ ಠಾಣೆಯಲ್ಲಿ ದೂರು ದಾಖಲಿಸುತ್ತಿದ್ದ ಸಂದರ್ಭದಲ್ಲೇ ಆರೋಪಿಯನ್ನು ಸೆರೆ ಹಿಡಿದ ಪೊಲೀಸರ ಕಾರ್ಯಕ್ಕೆ ಪ್ರಶಂಸೆ ವ್ಯಕ್ತವಾಗಿದೆ.
ಕಾರ್ಯಾಚರಣೆಯಲ್ಲಿ ಎಸಿಪಿ ರಂಜಿತ್ ನೇತೃತ್ವದಲ್ಲಿ ಉಳ್ಳಾಲ ಠಾಣಾಧಿಕಾರಿ ಸಂದೀಪ್, ಪಿಎಸ್ ಐ ಗಳಾದ ಶಿವಕುಮಾರ್, ಪ್ರದೀಪ್ ಹಾಗೂ ಕ್ರೈಂ ತಂಡ ಮತ್ತು ಕೊಣಾಜೆ ಠಾಣೆಯ ಪಿಎಸ್ ಐ ಶರಣಪ್ಪ ಭಂಡಾರಿ ನೇತೃತ್ವದ ಕ್ರೈಂ ತಂಡ ಭಾಗವಹಿಸಿತ್ತು.

Leave a Reply

Your email address will not be published. Required fields are marked *