ಶಾರದೆಯ ಫೋಟೊ ಶೂಟ್ ಗಾಗಿ 21 ದಿವಸಗಳ ವೃತವನ್ನುಆಚರಿಸಿದ ಕ್ರಿಶ್ಚಿಯನ್ ಯುವತಿ!

ಮಂಗಳೂರು : ಕೋವಿಡ್ ಮಹಾಮಾರಿಯ ಪರಿಣಾಮದ ನಡುವೆಯೂ ನವರಾತ್ರಿ ಉತ್ಸವ ಸರಳವಾಗಿ ನಡೆದಿದೆ. ಇದರ ನಡುವೆ ಆನ್‌ಲೈನ್‌ನಲ್ಲೂ ವಿವಿಧ ಸ್ಪರ್ಧೆಗಳು ನಡೆದಿದ್ದು, ಹಲವಾರು ಮಂದಿ ಶಾರದೆಯ ಫೋಟೊಶೂಟ್ ಮಾಡಿಸಿಕೊಂಡಿದ್ದು ವೈರಲ್ ಆಗಿತ್ತು.ಮಂಗಳೂರಿನ ಕ್ರಿಶ್ಚಿಯನ್ ಯುವತಿಯೋರ್ವಳು ಶಾರದೆಯ ಫೋಟೊ ಶೂಟ್ ಮಾಡಿಕೊಂಡಿದ್ದು, ಅದಕ್ಕಾಗಿ ಆಕೆ 21 ದಿವಸಗಳ ವೃತವನ್ನು ಅಚರಿಸಿದ್ದಾಳೆ. ಕೆಲವೊಂದು ಕಡೆಗಳಲ್ಲಿ ಫ್ಯಾಶನ್‌ಗಾಗಿ ಶಾರದೆಯ ಫೋಟೊ ಶೂಟ್ ಮಾಡುತ್ತಿದ್ದಾರೆ ಎನ್ನುವ ಆಕ್ರೋಶದ ನುಡಿಗಳು ಕೇಳಿ ಬರುತ್ತಿರುವ ನಡುವೆಯೂ ಆಸ್ಥೆಗೆ ದಕ್ಕೆ ಬಾರದ ಹಾಗೆ ಶಾರದೆಯ ಆರಾದನೆ ಮಾಡಿಕೊಂಡಿದ್ದು ವಿಶೇಷವಾಗಿದೆ.ನಗರದ ಅನೀಶಾ ಎನ್ನುವ ರೂಪದರ್ಶಿ ಈ ಫೋಟೊ ಶೂಟ್ ಮಾಡಿಸಿಕೊಂಡಿದ್ದು, ಸರ್ಪ್ರೈಸ್ ಸ್ಟುಡಿಯೋದ ದೀಪಕ್ ಗಂಗೂಲಿ ಸಂಯೋಜನೆಯಲ್ಲಿ ಛಾಯಾಗ್ರಾಹಕ ವರ್ಷಿಲ್ ಅಂಚನ್ ಕೈಚಳಕ ಹಾಗೂ ಮರ್ಸಿ ಲೇಡಿಸ್ ಸಲೂನ್‌ನ ಮರ್ಸಿ ವೀಣಾ ಡಿಸೋಜಾ ನೇತೃತ್ವದಲ್ಲಿ ಈ ಫೋಟೊ ಶೂಟ್ ನಡೆದಿತ್ತು.ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

Leave a Reply

Your email address will not be published. Required fields are marked *