ಮಂಗಳೂರು: ಭಾರತದ ಸಾರ್ವಜನಿಕ ವಲಯದ ಮೂರನೇ ಅತಿದೊಡ್ಡ ಬ್ಯಾಂಕ್ ಆಗಿರುವ ಬ್ಯಾಂಕ್ ಆಫ್ ಬರೋಡಾ 2020-21ನೇ ಹಣಕಾಸು ವರ್ಷದ ಎರಡನೇ ತ್ರೈಮಾಸಿಕದಲ್ಲಿ 5552 ಕೋಟಿ ರೂಪಾಯಿ ಕಾರ್ಯಾಚರಣೆ ಲಾಭ ಗಳಿಸಿದೆ. ಇದು ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇಕಡ 4ರಷ್ಟು ಮತ್ತು ಕಳೆದ ತ್ರೈಮಾಸಿಕಕ್ಕೆ ಹೋಲಿಸಿದರೆ ಶೇಕಡ 28ರಷ್ಟು ಅಧಿಕ.
ಈ ಅವಧಿಯಲ್ಲಿ ಜೈವಿಕ ಚಿಲ್ಲರೆ ಮತ್ತು ಕೃಷಿ ಸಾಲ ಕ್ರಮವಾಗಿ ಶೇಕಡ 16.8 ಹಾಗೂ 16.5ರಷ್ಟು ಹೆಚ್ಚಿದೆ. ಚಿಲ್ಲರೆ ಮಂಜೂರಾತಿ ಮತ್ತು ಹಂಚಿಕೆಯು 2ನೇ ತ್ರೈಮಾಸಿಕದಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ಶೇಕಡ 119ರಷ್ಟು ಹೆಚ್ಚಿದು, ಇದು ಕಳೆದ ತ್ರೈಮಾಸಿಕಕ್ಕಿಂತ ಶೇಕಡ 37ರಷ್ಟು ಅಧಿಕ ಎಂದು ಬ್ಯಾಂಕಿನ ಪ್ರಕಟಣೆ ಹೇಳಿದೆ.
ಜಾಗತಿಕ ಸಾಲ ನೀಡಿಕೆ ಶೇಕಡ 5.3ರಷಚ್ಟು ಹೆಚ್ಚಿದ್ದು, ವಾಹನ ಸಾಲ ಶೇಖಡ 34.8ರಷ್ಟು ಪ್ರಗತಿ ಕಂಡಿದೆ. ಶುಲ್ಕಗಳಿಂದ ಬಂದ ಆದಾಯ ಕಳೆದ ವರ್ಷಕ್ಕೆ ಹೋಲಿಸಿದರೆ ಶೇಕಡ 3.9ರಷ್ಟು ಅಧಿಕವಾಗಿದ್ದು, ಕಳೆದ ತ್ರೈಮಾಸಿಕಕ್ಕಿಂತ 22.2% ಹೆಚ್ಚಳ ಕಂಡಿದೆ. ವ್ಯಾಪಾರ ವಹಿವಾಟುಗಳಿಂದ ಬರುವ ಲಾಭ ಕಳೆದ ತ್ರೈಮಾಸಿಕಕ್ಕೆ ಹೋಲಿಸಿದರೆ ಶೇಕಡ 85.9ರಷ್ಟು ಮತ್ತು ಕಳೆದ ವರ್ಷ ಇದೇ ಅವಧಿಗೆ ಹೋಲಿಸಿದರೆ ಶೇಕಡ 6.8ರಷ್ಟು ಹೆಚ್ಚಿದೆ.
ನಿವ್ವಳ ಎನ್‍ಪಿಎ ಅನುಪಾತ 2020ರ ಸೆಪ್ಟೆಂಬರ್ 30ಕ್ಕೆ 9.14ರಷ್ಟಿದ್ದು, ಕಳೆದ ವರ್ಷ ಇದೇ ಅವಧಿಯಲ್ಲಿ ಇದು 10.25ರಷ್ಟಿತ್ತು. ಈ ತ್ರೈಮಾಸಿಕದಲ್ಲಿ ನಿವ್ವಳ ಲಾಭ 1679 ಕೋಟಿ ರೂಪಾಯಿ ಆಗಿದ್ದು, ಕ್ರೋಢೀಕೃತ ನಿವ್ವಳ ಲಾಭ 1771 ಕೋಟಿ ರೂಪಾಯಿಗೆ ಹೆಚ್ಚಿದೆ ಎಂದು ಪ್ರಕಟಣೆ ವಿವರಿಸಿದೆ.

Leave a Reply

Your email address will not be published. Required fields are marked *