ಬೈಕ್ ಅಪಘಾತ: ಓರ್ವ ಸಾವು, ಪಾದಚಾರಿ ಸೇರಿದಂತೆ ಇಬ್ಬರಿಗೆ ಗಂಭೀರ ಗಾಯ

ಉಳ್ಳಾಲ:  ಅಮಿತ ವೇಗದಲ್ಲಿ ಧಾವಿಸಿದ ಬೈಕ್ ಪಾದಚಾರಿಗೆ ಢಿಕ್ಕಿ ಹೊಡೆದು ರಸ್ತೆ ವಿಭಾಜಗಕ್ಕೆ ಹೊಡೆದು ಬಳಿಕ ವಿದ್ಯುತ್ ಕಂಬಕ್ಕೆ ಅಪ್ಪಳಿಸಿದ ಘಟನೆಯಲ್ಲಿ ಬೈಕ್ ಹಿಂಬದಿ ಸವಾರ 17ರ ಹರೆಯದ ಯುವಕ ಸ್ಥಳದಲ್ಲೇ ದಾರುಣವಾಗಿ ಸಾವನ್ನಪ್ಪಿದ್ದು, ಬೈಕ್ ಸವಾರ ಮತ್ತು ಪಾದಚಾರಿ ಇಬ್ಬರು ಗಂಭೀರ ಗಾಯಗೊಂಡಿರುವ ಘಟನೆ ರಾಷ್ಟ್ರೀಯ ಹೆದ್ದಾರಿ 66ರ  ಕೋಟೆಕಾರು ಸಂಕೊಳಿಗೆ  ಬಳಿ ಸಂಜೆ ಸಂಭವಿಸಿದೆ.ಬೈಕ್ ಸವಾರ  ಮಂಜೇಶ್ವರ ಗ್ಯಾಸ್ ಏಜೆನ್ಸಿ ಮಾಲೀಕರ ಪುತ್ರನಾಗಿದ್ದು, ಆತನ ಜತೆಗೆ ಹಿಂಬದಿಯಲ್ಲಿ ಸ್ನೇಹಿತನಿದ್ದ.  ಮಂಜೇಶ್ವರ ಕಡೆಯಿಂದ ಮಂಗಳೂರು ಕಡೆಗೆ ಅಮಿತ ವೇಗದಲ್ಲಿ  ಬೈಕ್ ನಲ್ಲಿ ಸಂಚರಿಸುತ್ತಿದ್ದ ಸಂದರ್ಭ  ರಾ.ಹೆ ದಾಟುತ್ತಿದ್ದ ಪಾದಚಾರಿಗೆ ಬೈಕ್ ಢಿಕ್ಕಿ ಹೊಡೆದಿದೆ.  ಈ ವೇಳೆ ನಿಯಂತ್ರಣ ಕಳೆದುಕೊಂಡ ಬೈಕ್ ಸವಾರ ರಸ್ತೆ ವಿಭಾಜಗಕ್ಕೆ  ಢಿಕ್ಕಿ ಹೊಡೆದು ನಂತರ  ವಿದ್ಯುತ್ ಟ್ರಾನ್ಸ್ ಫಾರ್ಮರ್ ಗೆ  ಬೈಕ್ ಅಪ್ಪಳಿಸಿದೆ.  ಘಟನಾ ಸ್ಥಳಕ್ಕೆ  ನಾಗುರಿ ಸಂಚಾರಿ ಠಾಣಾ ಪೊಲೀಸರು ಭೇಟಿ ನೀಡಿದ್ದಾರೆ. ಗಾಯಾಳುಗಳನ್ನು ತೊಕ್ಕೊಟ್ಟು  ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

Leave a Reply

Your email address will not be published. Required fields are marked *