ಫರಂಗಿ ಪೇಟೆ: ಫೋಟೋಗ್ರಾಫರ್, ಬಿಜೆಪಿ ಕಾರ್ಯಕರ್ತನ ಕೊಲೆಯತ್ನ

ಬಂಟ್ವಾಳ: ಅಂಗಡಿಗೆ ನುಗ್ಗಿ ಫೋಟೋಗ್ರಾಪರ್ ಒಬ್ಬರ ಮೇಲೆ ದಾಳಿ ನಡೆಸಿ ಹತ್ಯೆಗೆ ಯತ್ನಿಸಿರುವ ಘಟನೆ ಬುಧವಾರ ರಾತ್ರಿ ವೇಳೆ ಫರಂಗಿಪೇಟೆಯಲ್ಲಿ ನಡೆದಿದೆ.
ಫರಂಗಿಪೇಟೆಯಲ್ಲಿರುವ ಸ್ಟುಡಿಯೋ ಮಾಲಕ ದಿನೇಶ್ ಕೊಟ್ಟಿಂಜ ಹಲ್ಲೆಗೊಳಗಾದವರು.
ಇವರÀ ಮೇಲೆ ಅಪರಿಚಿತ ವ್ಯಕ್ತಿಗಳು ರಾತ್ರಿ ತಲವಾರು ದಾಳಿ ನಡೆಸಿದ್ದಾರೆ. ಘಟನೆಯಲ್ಲಿ ಗಾಯಗೊಂಡ ದಿನೇಶ್ ಅವರನ್ನು ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸ್ಥಳಕ್ಕೆ ಬಂಟ್ವಾಳ ಡಿ.ವೈ.ಎಸ್.ಪಿ ವೆಲೆಂಟೈನ್ ಡಿ ಸೋಜ ವೃತ್ತ ನಿರೀಕ್ಷಕ ಟಿ.ಡಿ. ನಾಗರಾಜ್, ಎಸ್. ಐ.ಪ್ರಸನ್ನ ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ.