ಮಗು ಸಹಿತ ಬಾವಿಗೆ ಹಾರಿದ ತಾಯಿ: ಮಗು ರಕ್ಷಣೆ

ಕಾಸರಗೋಡು: ಮಗು ಸಹಿತ ತಾಯಿ ಬಾವಿಗೆ ಹಾರಿದ ಘಟನೆ ನಿನ್ನೆ ರಾತ್ರಿ ಕಾಸರಗೋಡಿನ ಮಡಿಕೈಯಲ್ಲಿ ನಡೆದಿದೆ. ಘಟನೆಯಲ್ಲಿ ಮಹಿಳೆ ಮೃತಪಟ್ಟಿದ್ದು ಮಗುವನ್ನು ಸ್ಥಳೀಯರು ರಕ್ಷಿಸಿದ್ದಾರೆ. ಮಡಿಕೈ ನಿವಾಸಿ ಸುಧಾಕರ ಎಂಬವರ ಪತ್ನಿ ಬೀನಾ ತನ್ನ ಎರಡೂವರೆ ವರ್ಷದ ಹೆಣ್ಣುಮಗುವಿನ ಸಮೇತ ಮನೆ ಅಂಗಳದ ಬಾವಿಗೆ ಹಾರಿದ್ದು ವಿಷಯ ತಿಳಿದ ಸ್ಥಳೀಯರು ಮಗುವನ್ನು ರಕ್ಷಿಸಿದ್ದಾರೆ. ಬೀನಾ ಸಾವನ್ನಪ್ಪಿದ್ದಾರೆ. ನೀಲೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *