ರೈಲು ನಿಲ್ದಾಣದಲ್ಲಿ ಮೃತ ಮಹಿಳೆಗೆ ಎಸ್‍ಸಿಪಿಐ ನೆರವು

ಮುಜಾಪ್ಪರ್‍ಪುರ್: ಬಿಹಾರದ ಮುಜಾಪ್ಪರ್‍ಪುರ್ ರೈಲ್ವೆ ನಿಲ್ದಾಣದಲ್ಲಿ ಹಸಿವಿನಿಂದ ರೈಲ್ವೆ ನಿಲ್ದಾಣದಲ್ಲೇ ಕೊನೆ ಉಸಿರೆಳೆದ ಮಹೀಲೆ ಹಾಗೂ ಆಕೆ ಯನ್ನು ಎಬ್ಬಿಸುವ ಮಗುವಿನ ಅಸಹಾ ಯಕ ರೋದನೆಯು ದೇಶದ ಬಡತನ ಮತ್ತು ಕೇಂದ್ರ ಸರಕಾರದ ವೈಫಲ್ಯ ಗಳನ್ನು ಇಡೀ ಜಗತ್ತಿಗೆ ಪರಿಚಯ ಮಾಡಿದ ದೃಶ್ಯ ಎಂದು ಎಸ್‍ಡಿಪಿಐ ಹೇಳಿದೆ.
ರೈಲ್ವೆ ಸ್ಟೇಷನ್‍ನಲ್ಲಿ ಹಸಿವಿನಿಂದ ಮೃತ ಪಟ್ಟ ಮಹಿಳೆಯ ಮನೆಗೆ ಭೇಟಿ ನೀಡಿದ ಬಿಹಾರ ಎಸ್ಡಿಪಿಐ ರಾಜ್ಯಾ ದ್ಯಕ್ಷ ನಸೀಮ್ ಅಖ್ತರ್ ನೇತೃತ್ವದ ತಂಡ ಮೃತ ಮಹಿಳೆಯ ಇಬ್ಬರು ಮಕ್ಕಳ ಮುಂದಿನ ವಿದ್ಯಾಭ್ಯಾಸ ಹಾಗೂ ಎಲ್ಲಾ ಖರ್ಚು ವೆಚ್ಚವನ್ನು ಪಕ್ಷ ವಹಿಸಿಕೊಳ್ಳುವುದಾಗಿ ಭರವಸೆ ನೀಡಿದೆ. ಎಸ್‍ಡಿಪಿಐ ಬಿಹಾರ ಘಟಕದ ನಿಯೋಗವು ಮೃತ ಬಡ ಮಹಿಳೆಯ ಕುಟುಂಬವನ್ನು ಭೇಟಿಯಾಗಿ ಸಾಂತ್ವನ ಹೇಳಿದೆ.

Leave a Reply

Your email address will not be published. Required fields are marked *