ಟ್ರಂಪ್ ವಿರುದ್ಧ ಪ್ರತಿಭಟನೆ: 1000 ಮಂದಿ ಸೆರೆ

ವಾಷಿಂಗ್ಟನ್: ನನಗೆ ಉಸಿರಾ ಡಲು ಸಾಧ್ಯವಾಗುತ್ತಿಲ್ಲ'',
ನನ್ನನ್ನು ಕೊಲ್ಲಬೇಡಿ” ಎಂದು ಕಪ್ಪು ವರ್ಣೀಯ ಜಾರ್ಜ್ ಫ್ಲಾಯ್ಡ್ ಬೇಡಿ ಕೊಳ್ಳುತ್ತಿದ್ದರೂ, ‘ವೈಟ್’ ಪೊಲೀಸ್ ಮಾನವೀಯತೆ ಮರೆಯಲಿಲ್ಲ. ಎಂಟು ನಿಮಿಷಕ್ಕೂ ಅಧಿಕ ಕಾಲ ಜಾರ್ಜ್ ಫ್ಲಾಯ್ಡ್ ಕುತ್ತಿಗೆ ಮೇಲೆ `ಬಿಳಿ’ ಪೊಲೀಸ್ ಬಲವಾಗಿ ಮಂಡಿಯೂರಿ ವಿಕೃತಿ ಪ್ರದರ್ಶಿಸಿದ್ದರು. ಪರಿಣಾಮ, ಜಾರ್ಜ್ ಫ್ಲಾಯ್ಡ್ ಪ್ರಾಣ ಬಿಟ್ಟಿದ್ದರು. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆದ ಬಳಿಕ ಮಿನ್ನಿಯಾ ಪೊಲಿಸ್ ಸೇರಿದಂತೆ ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾದ 17 ನಗರಗಳಲ್ಲಿ ಪ್ರತಿಭಟನೆ ಆರಂಭವಾಯಿತು.
ಕಳೆದ ಐದು ದಿನಗಳಿಂದಲೂ ಪ್ರತಿಭಟನೆ ನಡೆಯುತ್ತಿದ್ದು, ಹಿಂಸಾಚಾರಕ್ಕೆ ತಿರುಗಿದೆ. ವಾಣಿಜ್ಯ ಮಳಿಗೆ, ಹೋಟೆಲ್ ಗಳಿಗೆ ಪ್ರತಿಭಟನಾಕಾರರು ಬೆಂಕಿ ಹಚ್ಚಿದ್ದಾರೆ. ಅಪರಿಚಿತನ ಗುಂಡೇಟಿಗೆ ಓರ್ವ ಬಲಿಯಾಗಿದ್ದಾನೆ. ಇನ್ನೂ ಹಲವರು ಪ್ರತಿಭಟನೆಯನ್ನೇ ನೆಪವಾಗಿಟ್ಟುಕೊಂಡು, ದುಬಾರಿ ವಸ್ತುಗಳ ಅಂಗಡಿಗಳನ್ನು ಲೂಟಿ ಹೊಡೆಯುತ್ತಿದ್ದಾರೆ. ಮಿನ್ನಿಯಾಪೊಲಿಸ್ ನಗರದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದು, ಪ್ರತಿಭಟನೆ ಸಂಬಂಧ 17 ನಗರಗಳಲ್ಲಿ ಇಲ್ಲಿಯವರೆಗೂ ಬರೋಬ್ಬರಿ 1400 ಮಂದಿಯನ್ನು ಅರೆಸ್ಟ್ ಮಾಡಲಾಗಿದೆ.
ಬ್ಲಾಕ್ ಮ್ಯಾನ್ ಜಾರ್ಜ್ ಫ್ಲಾಯ್ಡ್ ಮೇಲೆ ಮೃಗೀಯ ವರ್ತನೆ ತೋರಿದ ಪೊಲೀಸರನ್ನು ಸದ್ಯ ಬಂಧಿಸಲಾಗಿದ್ದು, ಕೆಲಸದಿಂದ ವಜಾಗೊಳಿಸಲಾಗಿದೆ.