ಕೊಲ್ಲೂರುಪದವು: ವಾಟರ್ ಲೈನ್ ವಂಚನೆ, ಪಂಚಾಯತ್ಗೆ ದೂರು

ಮೂಲ್ಕಿ: ಇಲ್ಲಿನ ಬಳ್ಕುಂಜೆ ಗ್ರಾಮ ಪಂಚಾಯತ್ನ ವ್ಯಾಪ್ತಿಯ ಕೊಲ್ಲೂರು ಪದವಿನಲ್ಲಿ ಕುಡಿಯುವ ನೀರಿನ ಪೈಪ್ಲೈನ್ನ್ನು ತಮ್ಮಿಷ್ಟಕ್ಕೆ ಬಂದಂತೆ ಬದಲಾಯಿಸುತ್ತಿರುವ ವ್ಯವಸ್ಥಿತ ತಂಡವೊಂದರ ವಿರುದ್ಧ ಗ್ರಾಮಸ್ಥರು ಪಂಚಾಯತ್ಗೆ ದೂರು ನೀಡಿದ್ದಾರೆ. ಮನೆ ಮನೆಗೆ ನೀರು ಸರಬರಾಜು ಮಾಡುವ ಪೈಪ್ಲೈನನ್ನು ಪಂಚಾಯತ್ ಅನುಮತಿ ಪಡೆಯದೇ ಏಕಾಏಕಿ ಬದಲಾಯಿಸುತ್ತಿರುವ ಬಗ್ಗೆ ಸ್ಥಳೀಯರು ಆಕ್ಷೇಪಿಸಿದ್ದಾರೆ. ಇದರಿಂದ ಕೆಳಪ್ರದೇಶದ ಮನೆ ಯವರಿಗೆ ನೀರು ಸರಬರಾಜು ಆಗದೇ ತೊಂದರೆಗೊಳಗಾಗಿದ್ದಾರೆ. ಪಂಚಾಯತ್ ಮೂಲಕ ಪೈಪ್ಲೈನ್ನ್ನು ಅಳವಡಿಸಿ ದ್ದರೂ ಸಹ ಕಿಡಿಗೇಡಿಗಳು ತಮಗಿಷ್ಟ ಬಂದಂತೆ ಮನೆಗಳಿಗೆ ಹೆಚ್ಚು ವಿಸ್ತೀರ್ಣದ ಪೈಪ್ಗಳನ್ನು ತಾವೇ ಅಳವಡಿಸಿಕೊಂಡು ಪ್ರಶ್ನಿಸಲು ಬಂದವರಿಗೆ ದಬಾಯಿಸುತ್ತಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಈ ಬಗ್ಗೆ ಆಕ್ಷೇಪ ಎತ್ತಿದ್ದ ಪಂಪ್ ಚಾಲಕರಿಗೂ ಸಹ ಬೆದರಿಸಿರುವ ಈ ತಂಡಕ್ಕೆ ಪಂಚಾಯತ್ ಸದಸ್ಯರೇ ಪರೋಕ್ಷವಾಗಿ ಸಹಕಾರ ನೀಡು ತ್ತಿದ್ದಾರೆ ಎಂದು ಆರೋಪಿಸಲಾಗಿದೆ. ನೀರು ಸಂಪರ್ಕ ಇರುವ ಗೇಟ್ ವಾಲನ್ನು ಸಹ ತಮ್ಮಿಷ್ಟದಂತೆ ಬಳಸುತ್ತಿದ್ದರೂ ಈ ರೀತಿ ಆದಲ್ಲಿ ಪಂಚಾಯತ್ ಯಾವ ಲೆಕ್ಕಕ್ಕೂ ಇಲ್ಲವೇ ಅಧ್ಯಕ್ಷರು ಸಹ ಮೌನವಹಿಸಿರುವುದನ್ನು ಗ್ರಾಮಸ್ಥರು ಪ್ರಶ್ನಿಸಿದ್ದಾರೆ. ಇಂತಹ ಅಕ್ರಮದ ವಿರುದ್ಧ ಗ್ರಾಮ ಪಂಚಾಯತ್ ಯಾವುದೇ ಕ್ರಮ ಕೈಗೊಳ್ಳದಿದ್ದಲ್ಲಿ ನೇರವಾಗಿ ಮೂಲ್ಕಿ ಪೊಲೀಸ್ ಠಾಣೆ ಹಾಗೂ ಜಿಲ್ಲಾಧಿಕಾರಿಗಳಿಗೆ ದೂರು ನೀಡಲು ಗ್ರಾಮಸ್ಥರು ನಿರ್ಧರಿಸಿದ್ದಾರೆ