ರಾಷ್ಟ್ರ, ಪ್ರಮುಖ ಸುದ್ದಿ

ಪುಲ್ವಾಮಾ ಮಾದರಿ ದಾಳಿಗೆ ಯತ್ನ: ಕಾರ್ ಮಾಲಕನ ಗುರುತು ಪತ್ತೆ
ಶ್ರೀನಗರ: ಪುಲ್ವಾಮ ಮಾದರಿಯಲ್ಲಿ ಮತ್ತೊಂದು ದಾಳಿ ನಡೆಸಲು ಯತ್ನಿಸಿ ಪರಾರಿಯಾಗಿದ್ದ ಕಾರ್ ಮಾಲಕನ ಗುರುತನ್ನು ಜಮ್ಮು-ಕಾಶ್ಮೀರ ಪೊಲೀಸರು ಪತ್ತೆ ಹಚ್ಚಿದ್ದಾರೆ. ಆರೋಪಿಯನ್ನು ಸೋಪಿಯಾನ್ ನಿವಾಸಿ ಹಿದಾಯತುಲ್ಲಾ ಮಲಿಕ್ ಎಂದು ಗುರುತಿಸಲಾಗಿದೆ. ಈತ ಕಳೆದ ವರ್ಷ ಹಿಜ್ಬುಲ್ ಮುಜಾಹುದ್ದೀನ್ ಸಂಘಟನೆಗೆ ಸೇರಿಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಹಿಜ್ಬುಲ್ ಮುಜಾಹೀದ್ದೀನ್ ಹಾಗೂ ಜೈಷ್-ಇ-ಮೊಹಮ್ಮದ್ ಉಗ್ರಗಾಮಿ ಸಂಘಟನೆಗಳು ಭದ್ರತಾ ಪಡೆಗಳನ್ನು ಗುರಿಯಾಗಿಸಿಕೊಂಡು ಕಾರ್ ಬಾಂಬ್ ಮೂಲಕ ಆತ್ಮಹತ್ಯ ದಾಳಿ ಸಂಚನ್ನು ನಡೆಸಿದ್ದವು. ಉಗ್ರರ ಸಂಚಿನ ಬಗ್ಗೆ ಪೊಲೀಸರಿಗೆ ಮಾಹಿತಿ ದೊರೆತಿತ್ತು. ಕಳೆದ ಬುಧವಾರ ಪುಲ್ವಾಮದಲ್ಲಿ ಬಂದೋಬಸ್ತ್ ಕೈಗೊಂಡು ತಪಾಸಣೆಗೆ ನಾಕಾಗಳನ್ನು ಸ್ಥಾಪನೆ ಮಾಡಲಾಗಿತ್ತು. ಸಂಜೆಯ ವೇಳೆ ಅನುಮಾಸ್ಪವಾಗಿ ಸಂಚರಿಸುತ್ತಿದ್ದ ಬಿಳಿ ಬಣ್ಣದ ಕಾರ್ ನಾಕಾ ಸಮೀಪ ಬಂದ ಸಂದರ್ಭ ಎಚ್ಚರಿಕೆ ನೀಡಿದ್ದ ಪೊಲೀಸರು ಗುಂಡು ಹಾರಿಸಿದರು. ಸ್ಥಳದಲ್ಲೇ ಕಾರ್ ಬಿಟ್ಟು ಉಗ್ರರು ನಾಪತ್ತೆಯಾಗಿದ್ದರು.