ಪ್ರಮುಖ ಸುದ್ದಿ, ಮಂಗಳೂರು

ಸಮುದ್ರಪಾಲಾಗುತ್ತಿದ್ದ ಮಹಿಳೆಯನ್ನು ಪ್ರಾಣದ ಹಂಗು ತೊರೆದು ರಕ್ಷಿಸಿದ ಉಳ್ಳಾಲದ ವೀರರು!
ಮಂಗಳೂರು: ಉಳ್ಳಾಲ ಸಮುದ್ರದಲ್ಲಿ ನಿರುಪಾಲಾಗುತ್ತಿದ್ದ ಮುಸ್ಲಿಂ ಮಹಿಳೆಯನ್ನು, ವಿಕ್ರಂ ಪುತ್ರನ್ ಹಾಗೂ ಕುನಾಲ್ ಅಮೀನ್ ಎಂಬ ಯುವಕರು ತಮ್ಮ ಪ್ರಾಣದ ಹಂಗು ತೊರೆದು ರಕ್ಷಿಸಿದ್ದಾರೆ. ಕೆಲ ದಿನಗಳ ಹಿಂದೆ ನಡೆದ ಘಟನೆಯ ವಿಡಿಯೋ ವೈರಲ್ ಆಗಿದ್ದು ಸೋಷಿಯಲ್ ಮೀಡಿಯಾದಲ್ಲಿ ವ್ಯಾಪಕ ಪ್ರಶಂಸೆ ವ್ಯಕ್ತವಾಗುತ್ತಿದೆ. ವಿಕ್ರಂ ಪುತ್ರನ್ ಹಾಗೂ ಕುನಾಲ್ ಅಮೀನ್ ಇವರು ಕರ್ನಾಟಕ ರಾಜ್ಯ ಪ್ರಶಸ್ತಿ ಹಾಗೂ ದ.ಕ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಶಿವಾಜಿ ಜೀವರಕ್ಷಕ ಯುವಕ ಮಂಡಲ, ಮೊಗವೀರ ಪಟ್ಣ ಉಳ್ಳಾಲ ಇದರ ಸದಸ್ಯರಾಗಿದ್ದಾರೆ.
ಮೇ 24 ರಂದು , ಪಾಣೆಮಂಗಳೂರು ಬಳಿ ನೇತ್ರಾವತಿ ನದಿಗೆ ಹಾರಿದ ಕಲ್ಲಡ್ಕದ 19 ವರ್ಷದ ನಿಶಾಂತ್ ಎಂಬ ಯುವಕನನ್ನು ಸ್ಥಳೀಯ ಮುಸ್ಲಿಂ ಯುವಕರು ಪ್ರಾಣದ ಹಂಗು ತೊರೆದು ರಕ್ಷಿಸಿಲು ಯತ್ನಿಸಿದ್ದರು. ಆದರೆ ಪ್ರಥಮ ಚಿಕಿತ್ಸೆಗೆ ಸ್ಪಂದಿಸದೆ ನಿಶಾಂತ್ ಮೃತಪಟ್ಟಿದ್ದರು.